ಮುಳ್ಳೇರಿಯ: ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 2021 ಜ.19ರಿಂದ 24ರ ತನಕ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ಅನ್ನದಾನ ಕಾರ್ಯಕ್ಕಾಗಿ ಜೈವ ಕೃಷಿಯ ಉದ್ಧೇಶದಿಂದ ಬಾಳೆ ಕಂದುಗಳ ವಿತರಣೆಯು ಫೆ.9ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ಕ್ಷೇತ್ರ ಭಂಡಾರ ಮನೆಯಲ್ಲಿ ನಡೆಯಲಿದೆ.
ಕಾರಡ್ಕ ಕೃಷಿ ಭವನದ ಕೃಷಿ ಅಧಿಕಾರಿ ಹುಸೈನ್.ಪಿ.ಪಿ ವಿತರಣೆ ಉದ್ಘಾಟನೆ ನಡೆಸುವರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ ಅಧ್ಯಕ್ಷತೆ ವಹಿಸುವರು. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ಕೋರಲಾಗಿದೆ.