ಮಂಜೇಶ್ವರ: ಮಂಜೇಶ್ವರ- ಮೀಂಜ ಪರಿಸರದ ಜನರಿಗೆ ಆಶಾಕಿರಣವಾಗಿ ಸ್ಥಾಪಿಸಲ್ಪಟ್ಟ ಅಸಾಸುದ್ದೀನ್ ಇಸ್ಲಾಮಿಕ್ ಎಜ್ಯುಕೇಶನ್ ಸೆಂಟರ್ ಪರಂದರಕುಝಿ ಇದರ ಅಧೀನದಲ್ಲಿರುವ ದಾರುಲ್ ಖೈರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ನಾಲ್ಕು ಮದ್ರಸಗಳ ಲೋಕಾರ್ಪಣೆಯನ್ನು ರಾಷ್ಟ್ರದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಉಸ್ತಾದ್ ಅವರು ಭಾನುವಾರ ನೆರವೇರಿಸಿದರು.
ದಾರುಲ್ ಖೈರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸಗೈದ ಬಳಿಕ ಸಂತಡ್ಕ, ಪುಲ್ಲರಕಟ್ಟ ಹಾಗೂ ಬೆಜ್ಜಂಗಳ ಮದ್ರಸಗಳನ್ನು ಉಸ್ತಾದ್ ರವರು ಲೋಕಾರ್ಪಣೆಗೈದರು. ಮೀಂಜ ಪರಿಸರ ಪ್ರದೇಶದಲ್ಲಿನ ಮೂಲಭೂತಸೌಲಭ್ಯಗಳ ಅಲಭ್ಯತೆಯಿಂದ ಧಾರ್ಮಿಕ, ಲೌಕಿಕ ಶಿಕ್ಷಣದಿಂದ ವಂಚಿತರಾದವರಿಗೆ ಉತ್ತಮ ಶಿಕ್ಷಣ ನೀಡಿ ಇಹ-ಪರ ಜೀವನದಲ್ಲಿ ಯಶಸ್ವಿಗಳಾಗಬೇಕೆಂಬ ದೂರದೃಷ್ಟಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಜಾತಿ ಮತ ಬೇಧವಿಲ್ಲದೆ ಸಹಕಾರವನ್ನು ನೀಡುವ ಉದ್ದೇಶದಿಂದ ಸ್ಥಾಪನೆಗೊಂಡ ಈ ಸಂಸ್ಥೆ ಎತ್ತರಕ್ಕೆ ಬೆಳೆಯಲಿ ಎಂದು ಎ.ಪಿ. ಉಸ್ತಾದ್ ಹಾರೈಸಿದರು.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಹಾರಿಸ್ ಹನೀಫಿ ಬಾಳಿಯೂರು, ಕಾರ್ಯದರ್ಶಿ ಮಜೀದ್ ಕೆಜಿಎನ್, ಸಿದ್ದೀಖ್ ಕೋಳಿಯೂರು, ಅಬ್ದುಲ್ ರಶೀದ್ ಹನೀಫಿ, ಆಶಿಕ್ ಸಖಾಫಿ, ಹನೀಸ್ ಸಖಾಫಿ, ಮುಕ್ರಿ ಬಶೀರ್ ಹಾಜಿ, ಮುಸ್ತಾಕ್ ಹಾಜಿ, ಅಬ್ಬಾಸ್ ಕುಳಬೈಲು ಮೊದಲಾದವರು ಉಪಸ್ಥಿತರಿದ್ದರು.