ಕುಂಬಳೆ: ಗಡಿನಾಡು ಕಾಸರಗೋಡಿನ ಕನ್ನಡ ಭಾಷಾ ಸಂಸ್ಕøತಿಯ ಅಸ್ಮಿತೆಯ ಸಂಕೇತವಾಗಿ ಏ.10 ರಿಂದ 12ರ ವರೆಗೆ ಸರೋವರ ಕ್ಷೇತ್ರ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯ ಪರಿಸರದಲ್ಲಿ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗುವ ಕನ್ನಡ ಸರಿ ಸಮ್ಮೇಳನದ ಪೂರ್ವಭಾವಿಯಾಗಿ ಮಾ.1 ರಂದು ಬೆಳಿಗ್ಗೆ 10ಕ್ಕೆ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ಮಹಿಳಾ ಸಮಿತಿಯ ಸಭೆ ನಡೆಯಲಿದೆ. ಜೊತೆಗೆ ಅದೇ ದಿನ ಸಂಜೆ 4ಕ್ಕೆ ಅನಂತಪುರ ಶ್ರೀಕ್ಷೇತ್ರ ಪರಿಸರದ ಸಭಾಂಗಣದಲ್ಲಿ ಸ್ಥಳೀಯ ಸಂಘಸಂಸ್ಥೆಗಳು, ಸ್ವಸಹಾಯ ಸಂಘಗಳು, ಕುಟುಂಬಶ್ರೀ ಸದಸ್ಯರ ವಿಶೇಷ ಸಭೆಯೂ ನಡೆಯಲಿದೆ. ಸಮ್ಮೇಳನದ ವಿಶೇಷ ಪ್ರಸ್ತುತಿಯಾಗಿರುವ ಕವಿ ಮಂಟಪ ಕಾರ್ಯಕ್ರಮದ ಪೂರ್ವಭಾವೀ ಸಭೆ ಇಂದು ಅಪರಾಹ್ನ (ಫೆ.29 ರಂದು) ಅಪರಾಹ್ನ 2 ಕ್ಕೆ ಕುಂಬಳೆಯ ಮಾಧವ ಪೈ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿರುವರು.
ಇಂದು ಹಾಗೂ ನಾಳೆ ಕನ್ನಡ ಸಿರಿ ಸಮ್ಮೇಳನದ ವಿವಿಧ ಸಮಿತಿಗಳ ಸಭೆ
0
ಫೆಬ್ರವರಿ 28, 2020