ಕಾಸರಗೋಡು: ನವೀಕೃತ ಚೆರ್ಕಳ ಸಂಚಾರಿ ವೃತ್ತವನ್ನು ಗುರುವಾರ ನಡೆದ ಸಮಾರಂಭದಲ್ಲಿ ಲೋಕೋಪಯೋಗಿ ಮತ್ತು ನೋಂದಾವಣಾ ಖಾತೆ ಸಚಿವ ಜಿ.ಸುಧಾಕರನ್ ಉದ್ಘಾಟಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಶಕ ಕೆ.ಕುಂಞÂರಾಮನ್, ಚೆಂಗಳಗ್ರಾಮ ಪಂಚಾಯಿತಿ ಅಧ್ಯಕ್ಷೆ ಷಾಹಿನಾ ಸಲೀಂ, ಕೋಯಿಕೋಡ್ ಉತ್ತರ ವಲಯ ಲೋಕೋಪಯೋಗಿ ವರಿಷ್ಠ ಇಂಜಿನಿಯರ್ ಇ.ಜಿ.ವಿಶ್ವಪ್ರಕಾಶ್, ಕಾರ್ಯಕಾರಿ ಇಂನಿಯರ್ ಕೆ.ಪಿ.ವಿನೋದ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಚೆರ್ಕಳಜಾಲ್ಸೂರು ರಸ್ತೆ , ಕಲ್ಲಡ್ಕ-ಚೆರ್ಕಳ ರಸ್ತೆ ಸೇರುವ ಚೆರ್ಕಳ ಪೇಟೆಯ ಈ ವೃತ್ತವನ್ನುಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಅವರವಿಶೇಷ ಆದೇಶ ಮೇರೆಗೆ ನಿರ್ಮಿಸಲಾಗಿದೆ. 70 ಲಕ್ಷ ರೂ. ವೆಚ್ಚದಲ್ಲಿ ಈ ವೃತ್ತ ನಿರ್ಮಾಣವಾಗಿದೆ. ಆರಂಭದಲ್ಲಿ ಚೆರ್ಕಳ ಪೇಟೆ ಅಭಿವೃದ್ಧಿ ಯೋಜನೆಯನ್ವಯ ಸುಮಾರು 2ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಮುಖ್ಯ ವೃತ್ತ ನಿರ್ಮಾಣಕಾರ್ಯ ಪೂರ್ತಿಗೊಂಡಿದ್ದರೂ, ಅಸಮರ್ಪಕ ಕಾಮಗಾರಿಯಿಂದ, ಇದನ್ನು ಮತ್ತೆ 70ಲಕ್ಷ ರೂ. ವ್ಯಯಿಸಿ ಪುನ: ನಿರ್ಮಿಸಲಾಗಿದೆ. ವಾಹನ ಚಾಲಕರನ್ನು ವ್ಯಾಪಕ ಗೊಂದಲಕ್ಕೆ ಸಿಲುಕಿಸುತ್ತಿದ್ದ ಇಲ್ಲಿನ ಮುಖ್ಯ ವೃತ್ತದ ಬಗ್ಗೆ 'ವಿಜಯವಾಣಿ'ಅಧಿಕಾರಿಗಳ ಗಮನ ಸೆಳೆದಿತ್ತು.
ಚೆರ್ಕಳ ಸಂಚಾರಿ ವೃತ್ತ ಉದ್ಘಾಟನೆ
0
ಫೆಬ್ರವರಿ 28, 2020