HEALTH TIPS

ಕ್ರೀಡಾ ವಲಯಕ್ಕೆ ಆದ್ಯತೆ- ಪಳ್ಳಿಕೆರೆ ಚಿರಕ್ಕಪಾರೆಯಲ್ಲಿ ಸುಸಜ್ಜಿತ ಸ್ಟೇಡಿಯಂ ನಿರ್ಮಾಣ

   
       ಕಾಸರಗೋಡು: ಜಿಲ್ಲೆಯ ಕ್ರೀಡಾ ವಲಯದ ಅಭಿವೃದ್ಧಿಗಾಗಿ ತನ್ನದೇ ಆದ ಕೊಡುಗೆ ನೀಡುವುದರೊಂದಿಗೆ ಕಾಞಂಗಾಡ್ ಬ್ಲೋಕ್ ಪಂಚಾಯಿತಿ ಗಮನ ಸೆಳೆಯುತ್ತಿದೆ. ಕ್ರೀಡಾ ಪ್ರತಿಭೆಗಳನ್ನು ಪತ್ತೆಮಾಡುವುದುರ ಜೊತೆಗೆ ತೆರೆದ ಕ್ರೀಡಾಂಗಣ(ಓಪನ್ ಸ್ಟೇಡಿಯಂ)ವನ್ನೂಕೊಡುಗೆಯಾಗಿ ನೀಡುವ ಯೋಜನೆಯಿರಿಸಿಕೊಂಡಿದೆ. ಬ್ಲೋಕ್ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಫುಟ್ಬಾಲ್, ಶಟಲ್, ವಾಲಿಬಾಲ್, ಕ್ರಿಕೆಟ್, ಕಬಡ್ಡಿ, ಸ್ಪರ್ಧೆಗಳನ್ನು ನಡೆಸಿ ಅಲ್ಲಿನ ವಿಜೇತರನ್ನು ಬ್ಲೋಕ್ ಮಟ್ಟದಲ್ಲಿ ತರಬೇತುಗೊಳಿಸಲಾಗುವುದು. 15 ವರ್ಷದಿಂದ ಆರಂಭಿಸಿ ಯುವಕ್ರೀಡಾಪಟುಗ¼ನ್ನು ಪತ್ತೆಮಾಡಲು ಕ್ರಮ ಆರಂಭಿಸಲಾಗಿದೆ.
                     ಮುಕ್ತ ಕ್ರೀಡಾಂಗಣ ನಿರ್ಮಾಣ:
     ಮೈದಾನಗಳ ಕೊರತೆ  ಕಾಡುತ್ತಿರುವುದನ್ನು ಗಮನಿಸಿ ಬ್ಲಾಕ್ ಪಂಚಾಯಿತಿ ವತಿಯಿಂದ ಸೌಲಭ್ಯ ಒದಗಿಸಲಾಗುತ್ತದೆ. ಇದರ ಅಂಗವಾಗಿ ಪಳ್ಳಿಕೆರೆ ಗ್ರಾಮಪಂಚಾಯಿತಿಯ ಚಿರಕ್ಕಪಾರೆಯಲ್ಲಿ ಈ  ತೆರೆದ ಕ್ರೀಡಾಂಗಣನಿರ್ಮಾಣಗೊಳ್ಳುತ್ತಿದೆ. 40 ಲಕ್ಷರೂ. ಬ್ಲೋಕ್ ಪಂಚಾಯಿತಿ,  6 ಲಕ್ಷ ರೂ.ಜಿಲ್ಲಾ ಪಂಚಾಯಿತಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಮೀಸಲಿರಿಸಿದೆ. ಕೇರಳೋತ್ಸವ ಸಹಿತ ಸಮಾರಂಭಗಳ ಅಂಗವಾಗಿನಡೆಯುವ ಕ್ರೀಡೋತ್ಸವಗಳಿಗೆ ಈಗ ತಲೆದೋರುವ ಮೈದಾನಗಳ ಕೊರತೆಗೆ ಈ ಯೋಜನೆ ಶಾಶ್ವತ ಪರಿಹಾರವಾಗಲಿದೆ.
2 ಎಕ್ರೆ ಜಾಗದಲ್ಲಿ ಕ್ರೀಡಾಂಗಣ, ಗ್ಯಾಲರಿಯೊಂದಿಗೆ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. 700 ಮಂದಿ ಏಕಕಾಲದಲ್ಲಿ ಕುಳಿತುಕೊಳ್ಳಬಹುದಾದ ಸೌಲಭ್ಯದ ಗ್ಯಾಲರಿಯಿದೆ. ಫುಟ್ಬಾಲ್, ವಾಲಿಬಾಲ್, ಅತ್ಲೆಟಿಕ್ಸ್,ಕಬಡ್ಡಿ ಸಹಿತ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಸಬಹುದಾದ ಸೌಲಭ್ಯಗಳಿವೆ. ಬ್ಲೋಕ್ ಪಂಚಾಯಿತಿಯ ಕನಸಿನ ಯೋಜನೆಯಾಗಿರುವ ಹಿನ್ನೆಲೆಯಲ್ಲಿ 2018-19,2019-20ನೇ ವಾರ್ಷಿಕಯೋಜನೆಗಳಲ್ಲಿ ಅಳವಡಿಸಿ ಸ್ಟೇಡಿಯಂ ನಿರ್ಮಾಣಕಾರ್ಯ ಕೈಗೆತ್ತಿಕೊಳ್ಳಲಾಗಿದೆ.  ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡು,  ಏಪ್ರಿಲ್ ತಿಂಗಳಲ್ಲಿ ಲೋಕಾಪರ್ಪಣೆ ನಡೆಸುವ ನಿರೀಕ್ಷೆಯಿದೆ.
          ಅಭಿಮತ:
     ಈ ಯೋಜನೆಗಳು ಪ್ರಧಾನವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪ್ರಯೋಜನದಾಯಕವಾಗಲಿದೆ. ಗ್ರಾಮಪಂಚಾಯಿತಿಗಳ ಸಹಕಾರದೊಂದಿಗೆ ಬ್ಲೋಕ್ ಮಟ್ಟದಲ್ಲಿ ನಡೆಸುವ ತರಬೇತಿಯಿಂದ ಜಿಲ್ಲೆಗೆ ಅನೇಕ ಕ್ರೀಡಾಳುಗಳನ್ನುಕೊಡುಗೆಯಾಗಿ ನೀಡಲು ಸಾಧ್ಯವಾಗಲಿದೆ.
                        ಎಂ.ಗೌರಿ, ಅಧ್ಯಕ್ಷೆ.
                  ಕಾಞಂಗಾಡ್ ಬ್ಲಾಕ್ ಪಂಚಾಯಿತಿ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries