ಬದಿಯಡ್ಕ: ಬೇಳ ಗರೋಡಿ ಶ್ರೀ ಬೈದರ್ಕಳ ನೇಮೋತ್ಸವ ಮತ್ತು ಬ್ರಹ್ಮಬಲಿಯು ನಾಳೆ ನಡೆಯಲಿರುವುದು.
ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಬೆಳಗ್ಗೆ 10ಗಂಟೆಗೆ ಬ್ರಹ್ಮ ತಂಬಿಲ, 11 ಗಂಟೆಗೆ ಗರೋಡಿ ಮನೆಯಿಂದ ಭಂಡಾರ ಹೊರಡುವುದು, 1 ಗಂಟೆಗೆ ಅನ್ನದಾನ, ಮಧ್ಯಾಹ್ನ 2 ಗಂಟೆಗೆ ಶುದ್ಧ ಕಲಶ ಹೋಮ, ರಾತ್ರಿ 9ಕ್ಕೆ ಶ್ರೀ ಬೈದರ್ಕಳ ಗರೋಡಿ ಇಳಿಯುವುದು ಮತ್ತು ಶ್ರೀ ಬ್ರಹ್ಮಬಲಿ, 11 ಗಂಟೆಗೆ ಶ್ರೀ ಬೈದರ್ಕಳ ಸುರಿಗೆ ಒಪ್ಪಿಸುವುದು, ಪ್ರಾತಃಕಾಲ 1 ಗಂಟೆಗೆ ಶ್ರೀ ಮಾಯಂದಾಳ ದೇವಿಯ ಉತ್ಸವ, 4 ಗಂಟೆಗೆ ಪೂಜಾರಿಗಳ ಸೇಟು, ಗಂಧ ಪ್ರಸಾದ, ಭಂಡಾರ ಒಳಗಿರಿಸುವುದರೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಗಲಿವೆ. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ 2.30ರಿಂದ ಕಯ್ಯಾರು ಪೊನ್ನೆತ್ತೋಡು ಮಹಿಳಾ ಯಕ್ಷಕೂಟದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6ರಿಂದ ಪುಟಾಣಿಗಳಿಂದ ನೃತ್ಯವೈವಿಧ್ಯ, 7.30ರಿಂದ ಧಾರ್ಮಿಕ ಸಭೆ ಶ್ರೀ ಬ್ರಹ್ಮಬೈದರ್ಕಳ ಸೇವಾಸಮಿತಿಯ ಅಧ್ಯಕ್ಷ ಮಹಾಲಿಂಗ ಕೆ. ಅಧ್ಯಕ್ಷತೆಯಲ್ಲಿ ಅಧ್ಯಾಪಕ ಪ್ರಸಾದ ತಲಶ್ಶೇರಿ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಉದ್ಯಮಿ ಸುರೇಶ್ ಬಟ್ಟಂಪಾರೆ, ರಾಮಕೃಷ್ಣ ಭಟ್ ಡಿ., ಪಿ. ನಾರಾಯಣ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕು. ರಮ್ಯ ಆರ್. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.