ಕುಂಬಳೆ: ಕುಂಬಳೆ ಸಮೀಪದ ನಾರಾಯಣಮಂಗಲ ಶ್ರೀಚೀರುಂಬಾ ಭಗವತಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಐದು ವರ್ಷಗಳಿಗೊಮ್ಮೆ ನಡೆಯುವ ನಡಾವಳಿ ಮಹೋತ್ಸವ ಗುರುವಾರ ವಿದ್ಯುಕ್ತವಾಗಿ ಆರಂಭಗೊಂಡಿತು.
ಗುರುವಾರ ಮಧ್ಯಾಹ್ನ 12ಕ್ಕೆ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪನೆ ನಡೆಯಿತು. ಸಂಜೆ 5.30ಕ್ಕೆ ಶ್ರೀಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಾಲುಬೂಡು ಪ್ರಕಾಶ ಕಡಮಣ್ಣಾಯ ಅವರಿಗೆ ಪೂರ್ಣಕುಂಭ ಸ್ವಾಗತ, 6ಕ್ಕೆ ಉಗ್ರಾಣ ಮಹೂರ್ತ, ಬಳಿಕ ಸಾಮೂಹಿಕ ಪ್ರಾರ್ಥನೆ, ಸ್ಥಳಶುದ್ದಿ, ವಾಸ್ತುಹೋಮ, ರಾಕ್ಷೋಘ್ನ ಹೋಮ, ರಾತ್ರಿ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 8.30 ರಿಂದ ಹರಿದಾಸ ಜಯಾನಂದಕುಮಾರ್ ಹೊಸದುರ್ಗ ಅವರಿಂದ ಶ್ರೀಭಗವತೀ ಮಹಾತ್ಮ್ಯೆ ಹರಿಕಥಾ ಸತ್ಸಂಗ ನಡೆಯಿತು.
ಶುಕ್ರವಾರ ಬೆಳಿಗ್ಗೆ 8ರಿಂದ 48 ತೆಂಗಿನಕಾಯಿ ಗಣಪತಿಹೋಮ, ಬಳಿಕ 8 ರಿಂದ 9 ಗಂಟೆಯ ಮಧ್ಯೆ ಮೀನಲಗ್ನ ಸುಮುಹೂರ್ತದಲ್ಲಿ ಕಲಶ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ 12 ರಿಂದ ಕಲಶಾಭಿಷೇಕ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 1 ರಿಂದ ಮಾಸ್ಟರ್ ಅಮಲ್ ರಾಜ್ ಪಿ.ಎಸ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಸಂಜೆ 4.30 ಕ್ಕೆ ಧಾರ್ಮಿಕ ಸಭೆ ನಡೆಯಿತು. ಸಂಜೆ 5.30ರಿಂದ ಲಲಿತಾ ಸಹಸ್ರ ನಾಮಾರ್ಚನೆ, 6ಕ್ಕೆ ಹೊರೆಕಾಣಿಕೆ ಮೆರವಣಿಗೆ, 7 ರಿಂದ ಗಾನ ರಸಮಂಜರಿ, ರಾತ್ರಿ 8 ರಿಂದ ಪೂಜೆ, ಪ್ರಸಾದ ವಿತರಣೆ, ಅನ್ನಸಂರ್ತಣೆಗಳು ನೆರವೇರಿದವು.
ಇಂದಿನ ಕಾರ್ಯಕ್ರಮಗಳು:
ಶನಿವಾರ ಬೆಳಿಗ್ಗೆ 9ಕ್ಕೆ ಮಹಾ ಚಂಡಿಕಾ ಹೋಮ ಆರಂಭ, ಮಧ್ಯಾಹ್ನ 12ಕ್ಕೆ ಹೋಮ ಪೂರ್ಣಾಹುತಿ, 1 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ರಿಂದ ತೆಂಕುತಿಟ್ಟಿನ ಪ್ರಸಿದ್ದ ಭಾಗವತರ ಕೂಡುವಿಕೆಯಲ್ಲಿ ಯಕ್ಷಗಾನ ವೈಭವ, ಸಂಜೆ 5 ರಿಂದ 150 ಮಂದಿ ಮಹಿಳೆಯರಿಂದ ಮೆಗಾ ತಿರುವಾದಿರ ನೃತ್ಯ ಪ್ರದರ್ಶನ, 5.30 ರಿಂದ ಕಣಿತ ಭಜನೆ ನಡೆಯಲಿದೆ. ಸಂಜೆ 6.30ರಿಂದ ನಡಾವಳಿ ಉತ್ಸವ ಆರಂಭಗೊಳ್ಳಲಿದ್ದು, ಕಾಸರಗೋಡು, ರಾಮದಾಸನಗರ, ಬದಿಯಡ್ಕ, ಪೆರ್ಲ, ಮವ್ವಾರು, ನಾಯ್ಕಾಪು ಪ್ರದೇಶಗಳಿಂದ ಹೊರೆಕಾಣಿಕೆ ಮೆರವಣಿಗೆ ಆಗಮನ, 7.15 ರಿಂದ ವಿವಿಧ ಬ್ಯಾಂಡ್ ಗಳ ವಾದ್ಯಘೋಷ, ಸಿಡಿಮದ್ದು ಪ್ರದರ್ಶನ, ರಾತ್ರಿ 8ಕ್ಕೆ ಶ್ರೀಕ್ಷೇತ್ರಕ್ಕೆ ಭಂಡಾರ ಆಗಮನ, 8.15 ರಿಂದ ಶ್ರೀದೇವಿಯ ನೃತ್ಯೋತ್ಸವ, 8.30 ರಿಂದ ಅನ್ನಸಂತರ್ಪಣೆ ನಡೆಯಲಿದೆ. 8.30 ರಿಂದ ಕೊಚ್ಚಿನ್ ಡ್ರಾಮಾ ವಿಶನ್ ಅವರಿಂದ ನರಕಾಸುರನ್ ಪೌರಾಣಿಕ ನೃತ್ಯ ನಾಟಕ, 10.30 ರಿಂದ ವಿಷ್ಣುಮೂರ್ತಿ ದೈವಗಳ ತೊಡಂಙಲ್ ನಡೆಯಲಿದೆ. ಭಾನುವಾರ ಮುಂಜಾನೆ 2.30 ಕ್ಕೆ ಬಲಿಪೂಜೆ, ದೇವರ ನೃತ್ಯೋತ್ಸವ, 5.30ರಿಂದ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಬೆಳಿಗ್ಗೆ 8 ಕ್ಕೆ ಚಪ್ಪರ ಮದುವೆ ಮತ್ತು ಎಡಙಚಾರ, 10.30 ರಿಂದ ದೇವರ ನೃತ್ಯೋತ್ಸವ, ತುಲಾಭಾರ ಸೇವೆ ನಡೆಯಲಿದೆ. ಬಳಿಕ ವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ ಅನ್ನಸಮತರ್ಪಣೆ, ಅಪರಾಹ್ನ 2 ರಿಂದ ಪಿಲಿಚಾಮುಂಡಿ ದೈವದ ಕೋಲ, ಬಬ್ಬರ್ಯನ ಕೋಲ, ಗುಳಿಗನ ಕೋಲ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆ, 8.30 ರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, 10 ಗಂಟೆಗೆ ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.