ಮುಳ್ಳೇರಿಯ: ಕಾಸರಗೋಡು ಜಿಲ್ಲಾ ಕ್ವಿಝ್ ಅಸೋಸಿಯೇಶನ್, ಆದೂರು ಜನಮೈತ್ರಿ ಪೊಲೀಸ್ ಮತ್ತು ಮುಳ್ಳೇರಿಯದ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಗ್ರಂಥಾಲಯದ ಆಶ್ರಯದಲ್ಲಿ ಜಿಲ್ಲಾಮಟ್ಟದ ವೃತ್ತಾಂತ ಕ್ವಿಝ್-2020 ಭಾನುವಾರ ಮುಳ್ಳೇರಿಯ ಗಜಾನನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
2020 ಜನವರಿ ಮತ್ತು ಫೆಬ್ರವರಿ ತಿಂಗಳ ವಾರ್ತಾ ಮಾಧ್ಯಮ ವರದಿಗಳನ್ನು ಆಧರಿಸಿ ಕಿರಿಯ, ಹಿರಿಯ ಪ್ರಾಥಮಿಕ, ಹೈಸ್ಕೂಲು,ಹೈಯರ್ ಸೆಕೆಂಡರಿ ಮತ್ತು ಸಾರ್ವಜನಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಬಹುಮಾನ ಪಡೆದವರು-ಕಿರಿಯ ಪ್ರಾಥಮಿಕ ವಿಭಾಗ ಪ್ರ: ಆದರ್ಶ್ ಮೋಹನ್ ಬೇತ್ತೂರ್‍ಪಾರೆ, ದ್ವಿ: ಅಭಿನವ್.ಸಿ ಆದೂರು, ತೃ: ಮಾಳವಿಕಾ.ಪಿ ಕರಿಚ್ಚೇರಿ, ಹಿರಿಯ ಪ್ರಾಥಮಿಕ ವಿಭಾಗ-ಪ್ರ: ಶ್ರೇಯಸ್ ನಂಬ್ಯಾರ್ ಚೆಮ್ನಾಡ್, ದ್ವಿ: ಸೋನ ಪರವನಡ್ಕ, ತೃ: ನಂದ ಕಿಶೋರ್ ಪೊಯ್ನಾಚಿ, ಹೈಸ್ಕೂಲ್-ಪ್ರ: ದೇವಿಕಾ ಮೋಹನ್.ಕೆ.ಕೆ ಮುಳ್ಳೇರಿಯ, ದ್ವಿ: ದೀಪಕ್ ಮೊಹನ್.ಕೆ.ಕೆ ಮುಳ್ಳೇರಿಯ, ತೃ: ಅಭಿನವ್ ಇರಿಯಣ್ಣಿ, ಸಾರ್ವಜನಿಕ ವಿಭಾಗ-ಪ್ರ: ರಮ್ಯ.ಕೆ.ಆರ್ ಬೋವಿಕ್ಕಾನ, ದ್ವಿ: ಸದಾನಂದ ಮುಳ್ಳೇರಿಯ, ತೃ: ಮೇಘ.ವಿ.
ಬಹುಮಾನ ವಿತರಣಾ ಸಮಾರಂಭದಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾದೇವಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನ ಪ್ರೊ.ಪ್ರಸನ್ನ ರೈ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನೋದನ್ ನಂಬ್ಯಾರ್ ಮತ್ತು ಆದೂರು ಪೊಲೀಸ್ ಠಾಣೆಯ ಸಹ ಠಾಣಾಧಿಕಾರಿ ರಾಧಾಕೃಷ್ಣನ್.ಎಂ ವಿಜೇತರಿಗೆ ಬಹುಮಾನ ವಿತರಿಸಿದರು. ಜನಮೈತ್ರಿ ಪೊಲೀಸ್ ರತೀಶ್.ಕೆ, ವ್ಯಾಪಾರಿ ಸಮಿತಿ ಮುಳ್ಳೇರಿಯ ಘಟಕದ ಅಧ್ಯಕ್ಷ ಬಾಲಕೃಷ್ಣ ರೈ ಉಪಸ್ಥಿತರಿದ್ದರು.
ಗ್ರಂಥಾಲಯದ ಸಂಚಾಲಕ ಕೆ.ಕೆ.ಮೋಹನನ್ ಮಾಸ್ತರ್ ಸ್ವಾಗತಿಸಿ, ಲೈಬ್ರೆರಿ ಕಾರ್ಯಕಾರಿ ಸಮಿತಿ ಸದಸ್ಯೆ ಸಾವಿತ್ರಿ ಟೀಚರ್ ವಂದಿಸಿದರು.