ಕಾಸರಗೋಡು: ಕಾಞಂಗಾಡ್ ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ ಜಲಸಂರಕ್ಷಣೆ ಯೋಜನೆ ಅಂಗವಾಗಿ ಜಲಾಶಯಗಳಿಗೆ ನೆರಳು ನೀಡಲು ಬಿದಿರು ಸಸಿಗಳು ಸಿದ್ಧವಾಗುತ್ತಿವೆ. ಅಜಾನೂರು, ಮಡಿಕೈ, ಉದುಮಾ, ಪಳ್ಳಿಕ್ಕರೆ, ಪುಲ್ಲೂರು-ಪೆರಿಯ ಸಹಿತ ಗ್ರಾಮಪಂಚಾಯತ್ ಗಳಲ್ಲಿ ಬ್ಯಾಂಬೂ ನರ್ಸರಿಗಳ ಮೂಲಕ ಬಿದಿರುಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ನೌರಿ ಖಾತರಿ ಯೋಜನೆಯ ಕಾರ್ಮಿಕರು ಪ್ರತಿದಿನ ಇವುಗಳ ಪೆÇೀಷಣೆ ಖಚಿತಪಡಿಸುತ್ತಿದ್ದಾರೆ. 5 ಗ್ರಾಮಪಂಚಾಯತ್ ಗಳಲ್ಲಿ ಹತ್ತು ಮಂದಿ ಈ ಪೆÇೀಷಣೆಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ನೌಕರಿ ಖಾತರಿ ಯೋಜನೆ ಕಾರ್ಮಿಕರು ಸ್ವಯಂ ಸಿದ್ಧಪಡಿಸಿರುವ ಕಂಪೆÇೀಸ್ಟ್ ಪಿಟ್ ನ್ನು ಬಿದಿರು ಸಸಿ ಬೆಳೆಸುವಿಕೆಗೆ ಬಳಸಲಾಗುತ್ತಿದೆ. 30 ಮೀಟರ್ ಸ್ಕ್ವೇರ್ ವಿಸ್ತೀರ್ಣದಲ್ಲಿ ಎಲ್ಲ ಪಂಚಾಯತ್ ನಲ್ಲೂ ಈ ಸಸಿಗಳು ಬೆಳೆಯುತ್ತಿವೆ.
ವಯನಾಡಿನಿಂದ ತರಿಸಲಾದ 2 ಕಿಲೋ ಬಿದಿರು ಬೀಜಗಳನ್ನು ವಿವಿಧ ಗ್ರಾಮಪಂಚಾಯತ್ ಗಳಿಗೆ ಹಂಚಲಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿತ್ತಲಾದ ಬೀಜಗಳು ಈಗ ಮೊಳಕೆ ಬಂದಿದ್ದು, ಮುಂದಿನ 2 ತಿಂಗಳ ಅವಧಿಯಲ್ಲಿ ಬೇರೆಡೆ ನೆಡುವ ಸ್ಥಿತಿಗೆ ಬರಲಿವೆ. ಇವು ಸಿದ್ಧವಾದೊಡನೆ ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಕೆರೆಗಳು, ತೋಡುಗಳು ಇತ್ಯಾದಿ ಜಲಾಶಯಗಳ ತಟದಲ್ಲಿ ನೆಡಲಾಗುವುದು. ಜೊತೆಗೆ ಪಂಚಾಯತ್ ಗಡಿ ಪ್ರದೇಶಗಳಲ್ಲಿ, ಗ್ರಾಮಪಂಚಾಯತ್ ಕಚೇರಿಗಳಲ್ಲಿ ಆವರಣಗೋಡೆಗಳ ಬದಲು ಬಿದಿರು ಸಸಿಗಳನ್ನು ನೆಡುವ ಯೋಜನೆಗಳಿವೆ. ಬೇಸಗೆ ಬಿರುಸುಗೊಳ್ಳುವ ವೇಳೆ ತಲೆದೋರುವ ಕುಡಿಯುವ ನೀರಿನ ಕ್ಷಾಮಕ್ಕೆ ಇದು ಒಂದು ಹಂತದ ವರೆಗೆ ಪರಿಹಾರ ಒದಗಿಸಲಿದೆ ಎಂಬ ನಿರೀಕ್ಷೆಯಲ್ಲಿ ಬ್ಲಾಕ್ ಪಂಚಾಯತ್ ಈ ಯೋಜನೆ ಜಾರಿಗೊಳಿಸುತ್ತಿದೆ.
ಹರಿತ ಕೇರಳಂಮಿಷನ್ ನ "ಇನ್ನು ನಾನು ಹರಿಯಲೇ.." ಎಂಬ ಯೋಜನೆ ಜಾರಿಗೊಳಿಸುವ ತುಂಬ ಮುನ್ನವೇ ಕಾಞಂಗಾಡ್ ಬ್ಲೊಕ್ ನದಿ ಸಹಿತ ಜಲಶಯಗಳ ಸಂರಕ್ಷಣೆಗೆ ಯೋಜನೆ ಸಿದ್ಧಪಡಿಸಿತ್ತು. ಇದರ ಮೊದಲ ಹಂತವಾಗಿ 2018-19ನೇ ಇಸವಿಯಲ್ಲಿ ವಿವಿಧ ಗ್ರಾಮಪಂಚಾಯತ್ ಗಳಲ್ಲಿ ಹರಿಯುವ ಚಿತ್ತಾರಿ ಹೊಳೆಯ ಪುನಶ್ಚೇತನಕ್ಕಾಗಿ "ಚಿತ್ತಾರಿ ನದಿಯನ್ನು ಅರಿಯೋಣ" ಎಂಬ ಯೋಜನೆ ಜಾರಿಗೊಳಿಸಿತ್ತು. ಎರಡನೇ ಹಂತವಾಗಿ 2019-20ನೇ ಇಸವಿಯಲ್ಲಿ ನದಿಯ ಎರಡೂ ಬದಿಗಳಲ್ಲಿ ರಾಶಿ ಬಿದ್ದಿರುವ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳ ನಿವಾರಣೆಯ ಜನಪರ ಯಜ್ಞ ನಡೆಸಲಾಗಿದೆ. 500 ಮೀಟರ್ ವರೆಗಿನ ಕೆಸರು ಹೂಳೆತ್ತುವಿಕೆಯೂ ನಡೆದಿದೆ. ಚಿತ್ತಾರಿ ನದಿ ಬ್ಲೋಕ್ ವ್ಯಾಪ್ತಿಯ ಪ್ರಧಾನ ಕುಡಿಯುವ ನೀರಿನ ಮೂಲವಾಗಿದೆ.