ಕುಂಬಳೆ: ಕಿದೂರು ಶ್ರೀ ಮಹಾದೇವ ದೇವಸ್ಥಾನದಲ್ಲಿ ಫೆ.21 ಮತ್ತು 22 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಮಹಾ ಶಿವರಾತ್ರಿ ಉತ್ಸವ ನಡೆಯಲಿದೆ.
ಇಂದು (ಫೆ.21) ಬೆಳಗ್ಗೆ 7.30 ರಿಂದ ನವಕ ಕಲಶಾಭಿಷೇಕ, 10 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪಲ್ಲ ಪೂಜೆ, ನಂತರ ಅನ್ನಸಂತರ್ಪಣೆ, ಸಂಜೆ 6.30 ಕ್ಕೆ ದೀಪಾರಾಧನೆ, ತಾಯಂಬಕ, ರಾತ್ರಿ 7 ರಿಂದ ಭಜನಾ ಕಾರ್ಯಕ್ರಮ, 7.30 ರಿಂದ ಬಾಲಗೋಕುಲ ಕಿದೂರು ಇವರಿಂದ ನೃತ್ಯ ವೈವಿಧ್ಯ, 9.30 ರಿಂದ ಶ್ರೀ ದೇವರ ಬಲಿ ಉತ್ಸವ, ರಾತ್ರಿ 2 ರಿಂದ ಭಾರ್ಗವ ವಿಜಯ ಯಕ್ಷಗಾನ ಬಯಲಾಟ ನಡೆಯುವುದು.
ಫೆ.22 ರಂದು ಬೆಳಗ್ಗೆ 9.30 ರಿಂದ ಭಜನಾ ಕಾರ್ಯಕ್ರಮ, 10 ಕ್ಕೆ ದಾಸ ಸಂಕೀರ್ತನೆ, 11 ರಿಂದ ಶ್ರೀ ದೇವರ ಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ ಜರಗಲಿದೆ.