ಪೆರ್ಲ: ಪೆರ್ಲ ನಾಲಂದ ಕಾಲೇಜಿನಲ್ಲಿ ಶನಿವಾರ ನಡೆದ ಬೃಹತ್ ಕೃಷಿ ಮೇಳದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಉತ್ತಮ ಕೃಷಿ ಉತ್ಪನ್ನಗಳಾದ ಅಡಕೆ, ತೆಂಗು, ಕೊಕ್ಕೋ, ಬಾಳೆ ಉತ್ಪನ್ನಗಳ ಪ್ರದರ್ಶನಕ್ಕೆ ಬಹುಮಾನ ವಿತರಿಸಲಾಯಿತು.
ಉತ್ತಮ ಅಡಕೆ ಫಸಲಿನ ಪ್ರದರ್ಶನದಲ್ಲಿ ಕೆ. ಎಸ್. ಹೆಗಡೆ ಸಪರ್ಂಗಳ ಪ್ರಥಮ, ಗಣಪತಿ ಭಟ್ ಸಜಂಗದ್ದೆ ದ್ವಿತೀಯ, ಬಾಳೆಗೊನೆ ಪ್ರದರ್ಶನದಲ್ಲಿ ಪತ್ತಡ್ಕ ಗಣಪತಿ ಭಟ್ ಪ್ರಥಮ, ಗಣಪತಿ ಭಟ್ ಸಜಂಗದ್ದೆ ಹಾಗೂ ವಿಶ್ವೇಶ್ವರ ಭಟ್ ಕಾರ್ಯಾಡು ದ್ವಿತೀಯ, ಕೊಕ್ಕೋ ಪ್ರದರ್ಶನದಲ್ಲಿ ಡಾ. ವಿಘ್ನೇಶ್ವರ ವರ್ಮುಡಿ ಪ್ರಥಮ, ಜಗದೀಶ್ ಬಿ. ಜೆ. ದ್ವಿತೀಯ ಬಹುಮಾನ ಗಳಿಸಿದರು.
ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಆನೆಮಜಲು ವಿಷ್ಣು ಭಟ್, ನಬಾರ್ಡ್ ಎ. ಜಿ. ಎಂ. ಜ್ಯೋತಿಷ್ ಜಗನ್ನಾಥ್, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್, ಪ್ರಗತಿಪರ ಕೃಷಿಕ ಡಾ. ಚಂದ್ರಶೇಖರ ಚೌಟ, ಕ್ಯಾಂಪೆÇ್ಕೀ ಲಿಮಿಟೆಡ್, ಮಂಗಳೂರು ಇದರ ಉಪಾಧ್ಯಕ್ಷ ಶಂ. ನಾ. ಖಂಡಿಗೆ ಮತ್ತಿತರರು ಬಹುಮಾನ ವಿತರಿಸಿದರು.