HEALTH TIPS

ಇರಾಕ್ ನ ಐದು ಪ್ರಾಂತ್ಯಗಳಿಗೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ವಿದೇಶಾಂಗ ಸಚಿವಾಲಯ ಸಲಹೆ

 
       ನವದೆಹಲಿ: ಸದ್ಯದ ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ಇರಾಕ್ ಐದು ಪ್ರಾಂತ್ಯಗಳಿಗೆ ಪ್ರಯಾಣ ಬೆಳೆಸದಂತೆ ಭಾರತೀಯ ವಿದೇಶಾಂಗ ಇಲಾಖೆ ಭಾರತೀಯರಿಗೆ ಸಲಹೆ ನೀಡಿದೆ.
    ಇರಾಕ್ ನ ಐದು ಪ್ರಾಂತ್ಯಗಳಾದ ನಿನೆವೆ, ಸಲಾಹುದ್ದೀನ್, ದಿಯಾಲಾ, ಅನ್ಬರ್, ಮತ್ತು ಕಿರ್ಕುಕ್ ಗಳನ್ನು ಹೊರತುಪಡಿಸಿ ಭಾರತೀಯ ಪ್ರಜೆಗಳು ಇರಾಕ್‍ಗೆ ಪ್ರಯಾಣಿಸುವುದನ್ನು ಪರಿಗಣಿಸಬಹುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ತಿಳಿಸಿದೆ. ಅಲ್ಲಿನ ಸದ್ಯದ ಭದ್ರತಾ ಪರಿಸ್ಥಿತಿಯಿಂದ ಇರಾಕ್ ನ ಈ ಐದು ಪ್ರಾಂತ್ಯಗಳು ಅಸುರಕ್ಷಿತವಾಗಿವೆ ಎಂದು ಸಚಿವಾಲಯ ಎಚ್ಚರಿಕೆ ಸಲಹೆಯಲ್ಲಿ ತಿಳಿಸಿದೆ.
      ಇರಾಕ್ ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ಆರಂಭವಾಗಿದ್ದು, ನಿನೆವೆ, ಸಲಾಹುದ್ದೀನ್, ದಿಯಾಲಾ, ಅನ್ಬರ್, ಮತ್ತು ಕಿರ್ಕುಕ್ ನಲ್ಲಿ ಪ್ರತ್ಯೇಕತಾವಾದಿಗಳು ಈ ಪ್ರತಿಭಟನೆಯ ಲಾಭ ಪಡೆದು ದಾಳಿ ಮಾಡುವ ಸಾದ್ಯತೆ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಭಾರತ ವಿದೇಶಾಂಗ ಇಲಾಖೆ ತನ್ನ ಪ್ರಜೆಗಳಿಗೆ ಇರಾಕ್ ಭೇಟಿ ಕುರಿತು ಸಲಹೆ ನೀಡಿದೆ. ಅಂತೆಯೇ ಇರಾಕ್ ನ ನಜಾಫ್ ಮತ್ತು ಕರ್ಬಾಲಾ ಪ್ರಾಂತ್ಯಗಳಿಗೆ ತೆರಳುವ ಯಾತ್ರಿಕರು ನಿರ್ಭೀತಿಯಿಂದ ಪ್ರಯಾಣಿಸಬಹುದು ಎಂದು ಗ್ರೀನ್ ಸಿಗ್ನಲ್ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries