ಕಾಸರಗೋಡು: ತೃಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ'ಆರಾಟ್ಟು ಮಹೋತ್ಸವ'ಕ್ಕಾಗಿ ಧ್ವಜಾರೋಹಣ ನಡೆಯಿತು. ಬ್ರಹ್ಮಶ್ರೀ ಉಚ್ಚಿಲತ್ತ್ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಧ್ವಜಾರೋಹಣಕ್ಕೆ ಮೊದಲು ಕೀಯೂರು ಶ್ರೀ ಧರ್ಮಶಾಸ್ತಾ ದೇವಾಲಯದಿಂದ ಶ್ರೀದೇವರ ಭವ್ಯಮೆರವಣಿಗೆ ತೃಕ್ಕನ್ನಾಡ್ ಕ್ಷೇತ್ರಕೆಕ ಆಗಮಿಸಿತು.
ಜಾತ್ರಾಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. 19ರಂದು ಬೆಳಗ್ಗೆ ಉತ್ಸವ, ಸಾಯಂಕಾಲ 4.30ಕ್ಕೆ ಮೆರವಣಿಗೆ, ರಾತ್ರಿ ತಿಡಂಬು ನೃತ್ಯ, ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.