ನವದೆಹಲಿ: ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನೇನಾದರೂ ಮತ್ತೆ ಗೆಲುವು ಸಾಧಿಸಿದರೆ ಷೇರು ಮಾರುಕಟ್ಟೆಯಲ್ಲಿ ಸಾವಿರದಿಂದ ಸಾವಿರ ಅಂಕಗಳಷ್ಟು ಜಿಗಿತ ಕಾಣಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಉದ್ಯಮಿಗಳಿಗೆ ಭರವಸೆ ನೀಡಿದರು.
ಉದ್ಯಮಿಗಳ ಜೊತೆಗಿನ ಸಂವಾದದಲ್ಲಿ ಟ್ರಂಪ್ ಮಾತನಾಡಿ, ಚುನಾವಣೆಯಲ್ಲಿ ಗೆದ್ದರೆ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಾಣುತ್ತದೆ. ಒಂದು ವೇಳೆ ನಾನೇನಾದರೂ ಸೋತರೆ ಹಿಂದೆಂದಿಗಿಂತಲೂ ಭೀಕರವಾದ ಪರಿಣಾಮ ಬೀರುತ್ತದೆ ಎಂದು ಹೇಳಿದರು.ಉದ್ಯಮಿಗಳ ಕಾಳಜಿಗೆ ಕಿವಿಗೂಡಿಸಿದ ಟ್ರಂಪ್?, ಅಮೆರಿಕದಲ್ಲಿ ಹೂಡಿಕೆ ಮಾಡಿದ್ದಕ್ಕೆ ಧನ್ಯವಾದಗಳಲ್ಲಿ ತಿಳಿಸಿದರು. ನೀವು ಒಳ್ಳೆಯ ಕೆಲಸ ಮಾಡುತ್ತೀದ್ದೀರಾ ಎಂದು ಮತ್ತೊಮ್ಮೆ ಧನ್ಯವಾಗಳನ್ನು ಹೇಳಿದರು. ಇದೇ ವೇಳೆ ಅಮೆರಿಕದಲ್ಲಿ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಲು ಆರ್ಥಿಕ ನಿಬರ್ಂಧ ಹಾಗೂ ನಿಯಮಗಳ ಸಡಿಲಿಕೆ ಕುರಿತು ಭರವಸೆ ನೀಡಿದರು. ಕೆಲವು ನಿಯಮಗಳು ಶಾಸನಬದ್ಧವಾಗಿವೆ. ಆದರೆ, ಹೆಚ್ಚು ನಿಯಮಗಳನ್ನು ಕಡಿತಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಟ್ರಂಪ್? ತಿಳಿಸಿದರು.ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂಡಾಡಿದ ಟ್ರಂಪ್, ಅವರೊಬ್ಬ ಕಠಿಣ ವ್ಯಕ್ತಿ. ನಾವು ಭಾರತದಲ್ಲಿ ಉದ್ಯೋಗ ಸೃಷ್ಟಿಸುತ್ತೇವೆ. ಮೋದಿ ಅವರು ನಮ್ಮಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತಾರೆ. ನಮ್ಮ ಸರ್ಕಾರ ಆರ್ಥಿಕತೆ, ಆರೋಗ್ಯ ಮತ್ತು ಸೇನೆಗಾಗಿ ಸಾಕಷ್ಟು ಕೆಲಸವನ್ನು ಮಾಡಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿರುವ ಕೊರೊನಾ ವೈರಸ್? ಕುರಿತು ಮಾತನಾಡಿ, ಆದಷ್ಟು ಬೇಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವುದಾಗಿ ಖಚಿತಪಡಿಸಿದ ಟ್ರಂಪ್, ಕೊರೊನಾ ವೈರಸ್? ವಿಚಾರದಲ್ಲಿ ಚೀನಾ ತುಂಬಾ ಶ್ರಮವಹಿಸುತ್ತಿದೆ. ಅಲ್ಲಿನ ಅಧ್ಯಕ್ಷ ಕ್ಸಿಜಿನ್ ಪಿಂಗ್ ಜೊತೆಯಲ್ಲಿಯೂ ನಾನು ಮಾತನಾಡಿದ್ದೇನೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶ್ರೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದರು. ಯುಎಸ್ ನಲ್ಲೂ ನಿಯಂತ್ರಣದಲ್ಲಿದೆ. ಇತರೆ ದೇಶಗಳು ಕೂಡ ಆರೋಗ್ಯಯುತವಾಗಿರಲಿ ಎಂದು ಹಾರೈಸಿದರು.
ಟ್ರಂಪ್ ಜತೆಗಿನ ಸಂವಾದದಲ್ಲಿ ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್ ಅಂಬಾನಿ, ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಿಶ್ರಾ, ಟಾಟಾ ಸನ್ಸ್ ಮುಖ್ಯಸ್ಥ ಎನ್. ಚಂದ್ರಶೇಖರನ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಮಂಗಳಂ ಬಿರ್ಲಾ ಸೇರಿದಂತೆ ಇತರೆ ಉದ್ಯಮಿಗಳು ಭಾಗಿಯಾಗಿದ್ದರು.