ಕುಂಬಳೆ: ಶ್ರೀಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ಮಾರ್ಚ್ 15 ರಿಂದ 20 ರ ತನಕ ನಡೆಯುವ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು.
ಶ್ರೀ ಕ್ಷೇತ್ರದ ಅಚ್ಚನ್‍ಮಾರರು ಪ್ರಾರ್ಥನೆ ನಡೆಸಿದ ಬಳಿಕ, ಅಮಂತ್ರಣ ಪತ್ರಿಕೆ ಬಿಡುಗಡೆಗೋಳಿಸಿದರು. ಈ ಸಂಧರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ಶ್ರೀಕೃಷ್ಣಯ್ಯ ಅನಂತಪುರ, ರಾಜಶೇಖರ ಮಾಸ್ತರ್ ಅನಂತಪುರ, ಕ್ಷೇತ್ರದ ಅಚ್ಚನ್‍ಮ್ಮಾರ್, ಕಾರ್ನವರ್‍ಮಾರ್, ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತೋಟ್ಟಿ, ಪ್ರಾಧಾನ ಕಾರ್ಯದರ್ಶಿ ಚಂದ್ರ ಕುಡೆಕಲ್ಲು, ಕೋಶಾಧಿಕಾರಿ ಮಾನ ಮಾಸ್ತರ್ ಕಾವೇರಿಕಾನ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುರೇಶ್ ಬಟ್ಟಂಪಾರ, ಕಾರ್ಯದ್ಯಕ್ಷ ಗಣೆಶ್ ಪಾರೆಕಟ್ಟ, ಎಲ್ಲಾ ಸಮಿತಿಯ ಪದಾಧಿಕಾರಿಗಳು, ಉಪ ಸಮಿತಿಯ ಪದಾಧಿಕಾರಿಗಳು, ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಿದ್ದತೆ ಭರದಿಂದ ಸಾಗುತ್ತಿದ್ದು ವಿವಿಧ ಉಪಸಮಿತಿಗಳು ಸಕ್ರಿಯವಾಗಿ ಚಟುವಟಿಕೆ ನಿರತವಾಗಿವೆ.