ಪೆರ್ಲ: ಕೇರಳ- ಕರ್ನಾಟಕ ಗಡಿಪ್ರದೇಶದಲ್ಲಿರುವ ಇತಿಹಾಸ ಪ್ರಸಿದ್ಧ ಅಡ್ಕಸ್ಥಳ ಬಹು:ಮಶ್ಹೂರ್ ವಲಿಯುಲ್ಲಾಹಿ(ರ.ಅ) ದರ್ಗಾಶರೀಫ್ನಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುವ ಉರುಸ್ ಸಮಾರಂಭ ಮಂಗಳವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿತು.
ಮಂಗಳವಾರ ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ ಅಬ್ದುಲ್ಲ ಮಾದುಮೂಲೆ ಧ್ವಜಾರೋಹಣ ನಡೆಸಿದರು. ಸಾಯಂಕಾಲ ಮಖಾಂ ಝಿಯಾರತ್ ನಂತರ ಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಅವರು ಉರುಸ್ ಅಂಗವಾಗಿ ನಡೆಯಲಿರುವ 5 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಡ್ಕಸ್ಥಳ ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಸೈಯದ್ ಮೀರ್ಝಾಹೀದ್ ತಂಙಳ್ ಮಂಜೇಶ್ವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಡ್ಕಸ್ಥಳದ ಮುದರಿಸ್ ಅಲ್ಹಾಜ್ ಕೆ.ಬಿ.ಅಬ್ದುಲ್ರಝಾಕ್ ಮಿಸ್ಬಾಹಿ ಪ್ರವಚನ ನೀಡಿದರು.
ಫೆ.5ರಂದು ಮುಹಮ್ಮದ್ ಅಝ್ಹರಿ ಪೆರೋಡ್, 6ರಂದು ಅಬೂಬಕರ್ ಸಿದ್ದೀಖ್ ಅಹ್ಮದ್ ಅಲ್ಜಲಾಲಿ ಕಲ್ಲೇಗ, 7ರಂದು ಅಬ್ದುಲ್ ಕರೀಂ ಫೈಝಿ ಕುಂತೂರು ಪ್ರವಚನ ನೀಡಲಿದ್ದಾರೆ.
ಫೆ.8ರಂದು ಉರೂಸ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಅಲ್ಹಾಫಿಲ್ ಶಮೀಸ್ಖಾನ್ ನಾಫೀ ಇಡುಕ್ಕಿ ಪ್ರವಚನ ನೀಡಲಿರುವರು. ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಲ್ಲರಕಲ್ ನೇತೃತ್ವದಲ್ಲಿ ಕೂಟ ಝಿಯಾರತ್ ನಡೆಯಲಿದೆ.