ಕಾಸರಗೋಡು: ಜಿಲ್ಲಾ ವಾರ್ತಾ ಇಲಾಖೆ ವತಿಯಿಂದ ಕಾಸರಗೋಡು ಪ್ರೆಸ್‍ಕ್ಲಬ್‍ನ ಸಹಕಾರದೊಂದಿಗೆ ಇಂದು ಮಾಧ್ಯಮ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕಾಸರಗೋಡು ಪ್ರೆಸ್‍ಕ್ಲಬ್ ಸಭಾಂಗಣದಲ್ಲಿ ನಡೆಯುವ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಪ್ರೆಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸುವರು. ಮಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಮುಖ್ಯ ಅತಿಥಿಯಾಗಿರುವರು. ಕೇರಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಣ್ಣೂರು ವಲಯ ಸಹಾಯಕ ನಿರ್ದೇಶಕ ಕೆ.ಪಿ.ಅಬ್ದುಲ್ ಖಾದರ್ ಪ್ರಾಸ್ತಾವಿಕ ಭಾಷಣ ಮಾಡುವರು. `ಮಾಧ್ಯಮ ಭಾಷೆ' ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ಟೆಲಿವಿಷನ್ ಪುರಸ್ಕಾರ ವಿಜೇತ ಜಿನೇಷ್ ಕುಮಾರ್ ಎರಮಂ, `ಎಡಿಟಿಂಗ್' ಎಂಬ ವಿಷಯದಲ್ಲಿ ಕೇರಳ ಮೀಡಿಯಾ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ಜಯಕೃಷ್ಣನ್ ನರಿಕುಟ್ಟಿ ತರಗತಿ ನಡೆಸುವರು. ನಂತರ ಜಿಲ್ಲೆಯ ವಿವಿಧ ಪ್ರೆಸ್ ಫಾರಂ ಪ್ರತಿನಿಧಿಗಳು ಸಂವಾದ ನಡೆಸುವರು. ಜಿಲ್ಲಾ ವಾರ್ತಾಧಿಕಾರಿ ಮಧುಸುದನನ್ ಎಂ. ಸ್ವಾಗತಿಸುವರು. ಸಹಾಯಕ ಸಂಪಾದಕ ಪಿ.ರಶೀದ್ ಬಾಬು ವಂದಿಸುವರು.
ಇಂದು ಮಾಧ್ಯಮ ಕಾರ್ಯಾಗಾರ
0
ಫೆಬ್ರವರಿ 25, 2020