HEALTH TIPS

ಸದೃಢವಾಗಿರುವ ದೇಶ ಸಂಪದ್ಭರಿತವಾಗುತ್ತದೆ':ಕೇರಳದ ಸಾಧಕಿ ಅಜ್ಜಿಯನ್ನು ನೆನಪಿಸಿದ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

 
       ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ದೇಶವನ್ನುದ್ದೇಶಿಸಿ 62ನೇ ಮನ್ ಕಿ ಬಾತ್ ಅವತರಣಿಕೆಯನ್ನುದ್ದೇಶಿಸಿ ಮಾತನಾಡಿದರು. ಅದರ ಮುಖ್ಯಾಂಶಗಳು ಹೀಗಿವೆ:
 - ಮುಂದಿನ ತಿಂಗಳು ಪರೀಕ್ಷೆ ಎದುರಿಸುತ್ತಿರುವ ಎಲ್ಲಾ ಮಕ್ಕಳಿಗೆ ಶುಭ ಹಾರೈಕೆಗಳು. ಪರೀಕ್ಷೆಯನ್ನು ಆತಂಕ, ಉದ್ವೇಗ ಮಾಡಿಕೊಳ್ಳದೆ ಆರಾಮಾಗಿ ಎದುರಿಸಿ.
-ನಮ್ಮ ದೇಶದ ಜೀವವೈವಿಧ್ಯತೆ ಇಡೀ ಮಾನವ ಜನಾಂಗಕ್ಕೆ ಮೌಲ್ಯವಾದ ಸಂಪತ್ತಾಗಿದೆ. ಅವುಗಳನ್ನು ಸಂರಕ್ಷಿಸಿ ಹೊರಜಗತ್ತಿಗೆ ತೋರಿಸಬೇಕು.
-ಇಂದಿನ ಮಕ್ಕಳು ಮತ್ತು ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಲು ಮತ್ತೊಂದು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇನ್ನು ಮುಂದೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಉಡಾವಣೆಯಾಗಲಿರುವ ಹೊಸ ರಾಕೆಟ್ ಉಡ್ಡಯನವನ್ನು ನಿಮ್ಮ ಕಣ್ಣ ಮುಂದೆಯೇ ವೀಕ್ಷಿಸಬಹುದು. ಅಲ್ಲಿ ಗ್ಯಾಲರಿ ಸೃಷ್ಟಿ ಮಾಡಲಾಗಿದ್ದು ಒಂದು ಸಲಕ್ಕೆ ಸುಮಾರು 10 ಸಾವಿರ ಜನರು ಕುಳಿತುಕೊಳ್ಳಬಹುದು.
-ಚಂದ್ರಯಾನ-2 ಉಡಾವಣೆ ವೇಳೆ ಇಸ್ರೊ ಕೇಂದ್ರಕ್ಕೆ ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿಗಳಲ್ಲಿನ ಉತ್ಸಾಹ ನೋಡಿ ನಿಜಕ್ಕೂ ಖುಷಿಯಾಯಿತು.
-ಮನ್ ಕಿ ಬಾತ್ ನಲ್ಲಿ ನಿನ್ನೆ ಪ್ರಧಾನಿ ಕೇರಳದ ಕೊಲ್ಲಂ ಜಿಲ್ಲೆಯ ವಿಶೇಷ ಮಹಿಳೆಯೊಬ್ಬರನ್ನು ನೆನಪಿಸಿಕೊಂಡರು. 105 ವರ್ಷದ ಭಾಗೀರಥಿ ಅಮ್ಮನವರು 10 ವರ್ಷದ ಬಾಲಕಿಯಾಗಿದ್ದಾಗ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಓದುವ ಅದಮ್ಯ ಬಯಕೆಯಿಂದ 105ನೇ ವಯಸ್ಸಿನಲ್ಲಿ ಓದು ಆರಂಭಿಸಿ ತಮ್ಮ 4ನೇ ತರಗತಿ ಪರೀಕ್ಷೆಯನ್ನು ಶೇಕಡಾ 75ರಷ್ಟು ಅಂಕ ಗಳಿಸುವ ಮೂಲಕ ತೇರ್ಗಡೆ ಹೊಂದಿದರು. ಇಂದಿನ ಜನತೆಗೆ ಅಂತವರು ದೊಡ್ಡ ಸ್ಪೂರ್ತಿ. ಅವರಿಗೆ ನನ್ನ ದೊಡ್ಡ ಪ್ರಣಾಮಗಳು.
-ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲೆಯ ಹಮಿರ್ಪುರ್ ಗ್ರಾಮದಲ್ಲಿನ ಮತ್ತೊಬ್ಬ ಸಲ್ಮಾನ್ ಎಂಬಾತನನ್ನು ಪಿಎಂ ಮೋದಿ ಪ್ರಸ್ತಾಪಿಸಿದ್ದಾರೆ. ಈತ ದಿವ್ಯಾಂಗನಾಗಿದ್ದು ಚಪ್ಪಲಿಗಳನ್ನು ಹೊಲಿದು, ಡಿಟಜೆರ್ಂಟ್ ತಯಾರಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ಸುಮಾರು 30 ದಿವ್ಯಾಂಗರಿಗೆ ತರಬೇತಿ ನೀಡಿ ಉದ್ಯೋಗ ಒದಗಿಸಿದ್ದಾರೆ. ಈ ವರ್ಷ ಮತ್ತೆ 100 ಮಂದಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿದ್ದಾರೆ. ಇಂತಹ ಉದ್ಯಮಶೀಲರನ್ನು ಪೆÇ್ರೀತ್ಸಾಹಿಸಬೇಕು.
-ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಉದ್ಯೋಗ ಸೃಷ್ಟಿಗೆ ಅಪಾರ ಸಾಮಥ್ರ್ಯ ಕಲ್ಪಿಸಿರುವ ಹುನಾರ್ ಹಾತ್ ಉಪಕ್ರಮವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಹುನಾರ್ ಹಾತ್ ಜನರ ಕನಸುಗಳಿಗೆ ರೆಕ್ಕೆ ಪುಕ್ಕಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
-ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಹುನಾರ್ ಹಾತ್‍ನಲ್ಲಿ ನಾನು ನಮ್ಮ ದೇಶದ ವಿಶಾಲತೆಗೆ ಸಾಕ್ಷಿಯಾಗಿದ್ದೇನೆ. ಕುಶಲಕರ್ಮಿಗಳ ಪರಿಶ್ರಮದ ಕಥೆಗಳು ನಿಜವಾಗಿಯೂ ಸ್ಫೂರ್ತಿದಾಯಕವಾಗಿವೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 3 ಲಕ್ಷ ಕುಶಲಕರ್ಮಿಗಳಿಗೆ ಹುನಾರ್ ಹಾತ್ ಮೂಲಕ ಉದ್ಯೋಗ ದೊರೆತಿದೆ. ಹುನಾರ್ ಹಾತ್ ಜನರ ಕನಸುಗಳಿಗೆ ರೆಕ್ಕೆ ಪುಕ್ಕಗಳನ್ನು ನೀಡುತ್ತಿದೆ ಎಂದು ಬಣ್ಣಿಸಿದರು.
         ಹುನಾರ್ ಹಾತ್‍ನಲ್ಲಿ ಭಾಗವಹಿಸುವವರಲ್ಲಿ ಶೇಕಡಾ 50ರಷ್ಟು ಕುಶಲಕರ್ಮಿಗಳು ಮಹಿಳೆಯರು ಎಂಬುದು ಶ್ಲಾಘನೀಯ. ಹುನಾರ್ ಹಾತ್‍ನಲ್ಲಿ, ದಿವ್ಯಾಂಗ ಮಹಿಳೆಯೊಬ್ಬಳು ತನ್ನ ವರ್ಣಚಿತ್ರಗಳನ್ನು ಫುಟ್‍ಪಾತ್‍ನಲ್ಲಿ ಮಾರಾಟ ಮಾಡುತ್ತಿದ್ದಳು ಆದರೆ ಹುನಾರ್ ಹಾತ್‍ನೊಂದಿಗೆ ಸಂಪರ್ಕ ಹೊಂದಿದ ನಂತರ ಆಕೆಯ ಜೀವನವು ಪರಿವರ್ತನೆಗೊಂಡಿದೆ. ಆದ್ದರಿಂದ "ಹುನಾರ್ ಹಾತ್ ಮಹಿಳೆಯರ ಸಬಲೀಕರಣಗೊಳಿಸುತ್ತಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries