HEALTH TIPS

ಪಳ್ಳತ್ತಡ್ಕ ಹವ್ಯಕ ವಲಯ ಸಭೆ


      ಪೆರ್ಲ: ಮುಳ್ಳೇರಿಯಾ ಹವ್ಯಕ ಮಂಡಲದ ಪಳ್ಳತ್ತಡ್ಕ ಹವ್ಯಕ ವಲಯದ ಫೆಬ್ರವರಿ ತಿಂಗಳ ಸಭೆ  ದಂಬೆಮೂಲೆ ನಾರಾಯಣ ಭಟ್ ಇವರ ಮನೆಯಲ್ಲಿ ಇತ್ತೀಚೆಗೆ ಜರಗಿತು.
       ನೂತನವಾಗಿ ಆಯ್ಕೆಯಾದ ಮೂವರು ಗುರಿಕ್ಕಾರರಾದ ಮುಣ್ಚಿಕಾನ  ಶ್ರೀಕೃಷ್ಣ ಭಟ್, ಚಂದ್ರಶೇಖರ ಭಟ್ ಪಳ್ಳತ್ತಡ್ಕ ಮತ್ತು ಉದಯಶಂಕರ ಕನಕಪ್ಪಾಡಿ ಇವರು 285 ಬಾರಿ ತುಲಾಭಾರ ಸ್ವೀಕರಿಸಿದ ಕೀರ್ತಿಯುಳ್ಳ ಭಾಗ್ಯ ಹೆಸರಿನ ಗೋಮಾತೆಗೆ ಆರತಿ ಬೆಳಗಿದರು. ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ವರದಿ ವಾಚಿಸಿದರು. ಖಜಾಂಚಿ ಉದನೇಶ ಕುಂಬಳೆ ಮಾಸಿಕ ಲೆಕ್ಕಪತ್ರವನ್ನು, ವಲಯೋತ್ಸವದ ಲೆಕ್ಕಪತ್ರವನ್ನು ಮಂಡಿಸಿದರು.
ಮಹಾನಂದಿ ಗೋಲೋಕದಲ್ಲಿ ಮಾರ್ಚ್ 4ರಂದು ಕೃಷ್ಣಾರ್ಪಣಮ್ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು, ಈ ಸಂದರ್ಭದಲ್ಲಿ ಛತ್ರ ಸಮರ್ಪಣೆ  ಸೇವೆಯಲ್ಲಿ, ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಲಾಯಿತು. ವಿಷ್ಣುಗುಪ್ತ ವಿಶ್ವ ವಿದ್ಯಾಲಯದ ನಿರ್ಮಾಣ ಕಾರ್ಯದ ಸಲುವಾಗಿ ವಲಯದಿಂದ ಮಾಹಿತಿ ಮತ್ತು ಧನಸಂಗ್ರಹ ಅಭಿಯಾನ ಜರಗುತ್ತಿದ್ದು ಎಲ್ಲರೂ ಸಹಕರಿಸುವಂತೆ ತಿಳಿಸಲಾಯಿತು. ಶಂಕರಪಂಚಮಿ, ರಾಮನವಮಿ ಪ್ರಯುಕ್ತ ಬೆಳೆ ಸಮರ್ಪಣೆ ಮಾಡುವ ಅವಕಾಶವನ್ನು ಹೇಳಲಾಯಿತು.  ಶಿಷ್ಯ ಬಂಧ ಏಪ್  ಇದರ ಮಾಹಿತಿಯನ್ನು ನೀಡಲಾಯಿತು.
ಲಕ್ಷ್ಮೀ ಲಕ್ಷಣದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಶೀಘ್ರದಲ್ಲಿ ಸೇರಿಸುವಂತೆ ನಿರ್ದೇಶಿಸಲಾಯಿತು.
      ಘಟಕಾಧ್ಯಕ್ಷರು ಘಟಕ ಸಭೆಗಳ ವರದಿ ನೀಡಿದರು. ಎಲ್ಲಾ ಘಟಕಗಳಲ್ಲಿಯೂ ನಿರಂತರವಾಗಿ ಘಟಕಸಭೆ ಜರಗಿಸಬೇಕೆಂದು ಚರ್ಚಿಸಲಾಯಿತು.
ಮಾಣಿಮಠದಲ್ಲಿ  ಜರಗಲಿರುವ ವಾರ್ಷಿಕೋತ್ಸವ, ಸೂತ್ರ ಸಂಗಮ ಕಾರ್ಯಕ್ರಮದಲ್ಲಿ  ವಲಯದಿಂದ  ಸಕ್ರಿಯವಾಗಿ ಕಾರ್ಯಕರ್ತರು ಭಾಗವಹಿಸುವಿಕೆಯ ಕುರಿತು ತಿಳಿಸಲಾಯಿತು. ಬಜಕೂಡ್ಳು ಅಮೃತಧಾರಾ ಗೋಶಾಲೆಯಲ್ಲಿ ಮಹಾಶಿವರಾತ್ರಿಯಂದು ವಿವಿಧ ಕಾರ್ಯಕ್ರಮಗಳಿದ್ದು, ಭಾಗವಹಿಸುವಂತೆ ತಿಳಿಸಲಾಯಿತು.  ವಿದ್ಯಾನಿಧಿಗೆ ಪೂರಕವಾಗಿ ವಿದ್ಯಾಧನ ಎಂಬ ವಿನೂತನ ಯೋಜನೆಯ ಬಗ್ಗೆ ಮಾಹಿತಿ ನೀಡಲಾಯಿತು.
ಫೆಬ್ರವರಿ 17ರಂದು ಶ್ರೀ ರಾಮ ಪಟ್ಟಾಭಿಷೇಕ ಕಾರ್ಯಕ್ರಮ ಸಂಪನ್ನಗೊಳ್ಳಲಿದ್ದು ಭಾಗವಹಿಸುವಂತೆ ತಿಳಿಸಲಾಯಿತು. ವಲಯದ ವ್ಯಾಪ್ತಿಯಲ್ಲಿ ಬರುವ ಆಯುರ್ವೇದ ವೈದ್ಯರ ವಿವರ ಒದಗಿಸುವಂತೆ ಕೇಳಲಾಯಿತು.  ಮುಜುಂಗಾವು ಶ್ರೀ ಭಾರತೀ ನೇತ್ರ ಚಿಕಿತ್ಸಾಲಯವು ಆಧುನಿಕ ವ್ಯವಸ್ಥೆಗಳಿಂದ ಕೂಡಿದ್ದು, ನೇತ್ರ ಚಿಕಿತ್ಸಾ ಶಿಬಿರಗಳನ್ನ ಆಯೋಜಿಸುವ ಮೂಲಕ ಸಂಸ್ಥೆಯನ್ನು ಮುನ್ನಡೆಸಬೇಕೆಂದೂ ಏತಡ್ಕದಲ್ಲಿ ಜರಗಿದ ಶಿಬಿರದಲ್ಲಿ ಅರ್ಹರಿಗೆ ಕನ್ನಡಕ ವಿತರಣೆ ಮಾಡಿದ ಮಾಹಿತಿಯನ್ನು ನಾರಾಯಣ ಭಟ್, ದಂಬೆಮೂಲೆ ತಿಳಿಸಿದರು.
       ಶ್ರೀ ಗುರುಪೀಠದಿಂದ ಬಂದ ಗೋಕರ್ಣ ಅಶೋಕೆಯಲ್ಲಿ ಜರಗುವ ಸರ್ವ ಸೇವಕ ಸಮಾವೇಶದ ಕುರಿತು ವಿಶೇಷ ಸುತ್ತೋಲೆಯನ್ನು ಓದಲಾಯಿತು. (ಮಾರ್ಚ್ 1ರಂದು ). ವಲಯ ಅಧ್ಯಕ್ಷ ಪೆರುಮುಂಡ ಪರಮೇಶ್ವರ ಭಟ್ ಉಪಸ್ಥಿತರಿದ್ದರು. ರಾಮತಾರಕ ಮಂತ್ರ, ಶಾಂತಿ ಮಂತ್ರ,ಶಂಖನಾದ ಮತ್ತು ಧ್ವಜಾವರೋಹಣದೊಂದಿಗೆ ಸಭೆ ಮುಕ್ತಾಯವಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries