ಕುಂಬಳೆ: ಗಡಿನಾಡು ಕಾಸರಗೋಡಿನ ಕನ್ನಡ ಭಾಷಾ ಅಸ್ಮಿತೆಯನ್ನು ಕಾಪಿಡುವುದು ಮತ್ತು ಶಕ್ತಿ ಪ್ರದರ್ಶನದ ವೇದಿಕೆಯಾಗಿ ಎ.10 ರಿಂದ 12ರ ವರೆಗೆ ಸರೋವರ ಕ್ಷೇತ್ರ ಅನಂತಪುರ ಶ್ರೀ ಅನಂತಪದ್ಮನಾಭ ದೇವಾಲಯ ಪರಿಸರದಲ್ಲಿ ಆಯೋಜಿಸಲಾಗುವ ಕನ್ನಡ ಸಿರಿ ಸಮ್ಮೇಳನದ ಕೇಂದ್ರ ಸಮಿತಿಯ ಮಹತ್ವದ ಸಭೆ ಫೆ.23 ರಂದು ಬೆಳಗ್ಗೆ 10 ರಿಂದ ಕುಂಬಳೆ ಮಾಧವ ಪೈ ಸಭಾಂಗಣದಲ್ಲಿ ನಡೆಯಲಿದೆ.
ಕನ್ನಡ ಸಿರಿ ಸಮ್ಮೇಳನದ ಮೂರು ದಿನಗಳ ಸಮಗ್ರ ಕಾರ್ಯಕ್ರಮಗಳ ಅಂತಿಮ ರೂಪುರೇಖೆಗಳ ತಯಾರಿ ಮತ್ತು ಕಾರ್ಯಕ್ರಮ ನಿರ್ವಹಣೆಯ ಬಗ್ಗೆ ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾವುದು. ಜಿಲ್ಲೆಯ, ಹೊರನಾಡಿನ ಕನ್ನಡ ಭಾಷಾ ಸ್ನೇಹಿಗಳು, ಸಂಘಸಂಸ್ಥೆಗಳ ಪದಾ„ಕಾರಿಗಳು, ಜನಸಾಮಾನ್ಯರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬಹುದೆಂದು ಕನ್ನಡ ಸಿರಿ ಸಮ್ಮೇಳನ ಆಯೋಜನ ಸಮಿತಿಯ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.