ಕುಂಬಳೆ: ನಾರಾಯಣಮಮಂಗಲ ಶ್ರೀಚೀರುಂಬಾ ಭಗವತಿ ಕ್ಷೇತ್ರದಲ್ಲಿ ಫೆ.27 ರಿಂದ ಮಾ.1ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ ಮತ್ತು ಐದು ವರ್ಷಗಳಿಗೊಮ್ಮೆ ಆಯೋಜಿಸಲಾಗುವ ನಡಾವಳಿ ಮಹೋತ್ಸವದ ಗೊನೆ ಮುಹೂರ್ತ ಶನಿವಾರ ಸಾಂಪ್ರದಾಯಿಕ ಶ್ರದ್ದಾ ಭಕ್ತಿಗಳಿಂದ ನೆರವೇರಿತು.
ಕ್ಷೇತ್ರದ ಆಚಾರ ವರ್ಗದವರ ನೇತೃತ್ವದಲ್ಲಿ ನಾಯ್ಕಾಪಿನಲ್ಲಿ ಮುಹೂರ್ತ ನೆರವೇರಿತು. ಈ ಸಂದರ್ಭ ಉತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಕೆ.ಮೋಹನ್‍ದಾಸ್, ಸಂಚಾಲಕ ನ್ಯಾಯವಾದಿ ಎನ್.ಪದ್ಮನಾಭ, ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಗೋಪಾಲ ಚೆಟ್ಟಿಯಾರ್ ಪೆರ್ಲ, ಕಾರ್ಯದರ್ಶಿ ಕೆ.ಪ್ರಭಾಕರ ಕೂಡ್ಲು, ಉಪಾಧ್ಯಕ್ಷ ಎಂ.ನಾರಾಯಣ, ಕೋಶಾಧಿಕಾರಿ ಸದಾಶಿವ ಮವ್ವಾರು, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ರವಿ ನಾಯ್ಕಾಪು, ಆಚಾರ ವರ್ಗದವರು ಉಪಸ್ಥಿತರಿದ್ದರು. ನಾಯ್ಕಾಪಿನಿಂದ ನಾರಾಯಣಮಂಗಲದಲ್ಲಿರುವ ಶ್ರೀಕ್ಷೇತ್ರಕ್ಕೆ ಮೆರವಣಿಗೆಯ ಮೂಲಕ ಗೊನೆ ತರಲಾಯಿತು.