ಮಂಜೇಶ್ವರ: ವರ್ಕಾಡಿಯ ಶ್ರೀ ಕಾವೀ: ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶದ ದಿನಾಚರಣೆ ಮತ್ತು ನವಮ ವರ್ಷದ ಭಜನೋತ್ಸವ ಮಾ.8 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಅಂದು ಪ್ರಾತ: 6.42 ಕ್ಕೆ ಭಜನೋತ್ಸವ ಆರಂಭ, ಬ್ರಹ್ಮಶ್ರೀ ದಿನೇಶಕೃಷ್ಣ ತಂತ್ರಿ ವರ್ಕಾಡಿ ಅವರಿಂದ ದೀಪ ಪ್ರಜ್ವಲನೆ, ಬೆಳಗ್ಗೆ 8 ರಿಂದ ಗಣಪತಿ ಹವನ, ಮಧ್ಯಾಹ್ನ 12.30 ಕ್ಕೆ ಶ್ರೀ ದೇವರ ಮಹಾಪೂಜೆ, ಪ್ರಸಾದ ವಿತರಣೆ, 1.30 ಕ್ಕೆ ಅನ್ನಸಂತರ್ಪಣೆ, ಸಂಜೆ 6.38 ಕ್ಕೆ ಭಜನೋತ್ಸವ ಮಂಗಲ, ರಾತ್ರಿ 7.30 ಕ್ಕೆ ಶ್ರೀ ದೇವರ ರಂಗಪೂಜೆ, ಪ್ರಸಾದ ವಿತರಣೆ ನಡೆಯಲಿದೆ.