ಕಾಸರಗೋಡು: ಎಲ್.ಪಿ. ಮಟ್ಟದಲ್ಲಿ ಸಂಸ್ಕøತ ಅಧ್ಯಾಪಕ ಹುದ್ದೆಯನ್ನು ಸೃಷ್ಟಿಸಬೇಕೆಂದು ಕೇರಳ ಸಂಸ್ಕøತ ಅಧ್ಯಾಪಕ ಫೆಡರೇಶನ್ ಜಿಲ್ಲಾ ಸಮ್ಮೇಳನದಲ್ಲಿ ಆಗ್ರಹಿಸಿದೆ.
ಕಾಸರಗೋಡು ಮುನ್ಸಿಪಾಲಿಟಿ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಮಿಸ್ರಿಯಾ ಹಮೀದ್ ಸಮ್ಮೇಳನವನ್ನು ಉದ್ಘಾಟಿಸಿದರು. ಕಾಸರಗೋಡು ಟೌನ್ ಯು.ಪಿ. ಶಾಲೆಯಲ್ಲಿ ನಡೆದ ಜಿಲ್ಲಾ ಸಮ್ಮೇಳನದಲ್ಲಿ ನಗರಸಭಾ ಕೌನ್ಸಿಲರ್ ರಾಶಿದ್ ಪೂರಣಂ, ಮಾಜಿ ರಾಜ್ಯ ಅಧ್ಯಕ್ಷ ಪಿ.ಎನ್.ಮಧುಸೂದನನ್, ರಾಜ್ಯ ಕಾರ್ಯದರ್ಶಿ ಟಿ.ಪಿ.ಪದ್ಮ ಕುಮಾರ್, ಸುನಿಲ್ ಕುಮಾರ್ ಕೋಡೋತ್, ಹರಿಕೃಷ್ಣನ್ ಕೆ.ಟಿ, ಶಂಕರನ್, ಶೈಮ ಕೆ.ಸಿ, ಉಮಾ ಮೊದಲಾದವರು ಮಾತನಾಡಿದರು.
ಪ್ರಸ್ತುತ ವರ್ಷ ಸೇವೆಯಿಂದ ನಿವೃತ್ತರಾಗುವ ಅಧ್ಯಾಪಕರಿಗೆ ಬೀಳ್ಕೋಡುಗೆ ನೀಡಲಾಯಿತು. ವೆಂಕಟಕೃಷ್ಣ ಭಟ್ ಸ್ವಾಗತಿಸಿದರು. ಹರಿ ಕುಮಾರ್ ಇ.ಎ. ವಂದಿಸಿದರು.