ಬದಿಯಡ್ಕ: ಅರ್ಪಣಾ ಭಾವದಿಂದ ಕೆಲಸಕಾರ್ಯಗಳಿಗೆ ಮುಂದಡಿಯಿಟ್ಟರೆ ನೆನೆಸಿದ ಕಾರ್ಯವು ಯಶಸ್ವಿಯಾಗಿ ಕೈಗೂಡುವುದು. ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶ್ರದ್ಧೆ, ಭಕ್ತಿಯು ಮೈಗೂಡಿಕೊಂಡು ಜೀವನವು ಸಾರ್ಥಕತೆಯನ್ನು ಕಾಣಲಿದೆ ಎಂದು ಧಾರ್ಮಿಕ ಮುಂದಾಳು ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ಮಾರ್ಪನಡ್ಕ ಜಯನಗರ ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ನಿರ್ಮಾಣ ಹಂತದಲ್ಲಿರುವ ಭೋಜನಶಾಲೆ ಮತ್ತು ಸಭಾಭವನದ ಕಾಮಗಾರಿ ಕೆಲಸಗಳನ್ನು ವೀಕ್ಷಿಸಿ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.
ಶ್ರೀ ಮಂದಿರದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರನ್ನು ಪದಾ„ಕಾರಿಗಳು ಶಾಲು ಹೊದೆಸಿ ಗೌರವಿಸಿದರು. ಶ್ರೀ ಮಂದಿರಕ್ಕೆ ಈ ಹಿಂದೆಯೂ ಆರ್ಥಿಕವಾಗಿ ಸಹಾಯ ಮಾಡಿರುವ ಅವರು ಮುಂದಿನ ಕೆಲಸ ಕಾರ್ಯಗಳಿಗೆ ಸಹಾಯ ಹಸ್ತ ನೀಡುವ ಇಂಗಿತವನ್ನು ವ್ಯಕ್ತಪಡಿಸಿದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಅಧ್ಯಕ್ಷರಾದ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀ ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಈ ಸಂದರ್ಭದಲ್ಲಿ ಯಾದವ ಸೇವಾಸಂಘ ಅಗಲ್ಪಾಡಿಯ ಉಪಾಧ್ಯಕ್ಷ ರತ್ನಾಕರ ಕಲ್ಲಕಟ್ಟ, ಪ್ರಧಾನ ಕಾರ್ಯದರ್ಶಿ ನಾರಾಯಣ ಪದ್ಮಾರ್, ರಕ್ಷಾ„ಕಾರಿ ನಾರಾಯಣ ಮಣಿಯಾಣಿ ಚೋಕೆ, ಗೌರವಾಧ್ಯಕ್ಷ ಬಾಬು ಮಣಿಯಾಣಿ ಜಯನಗರ, ಸುಧಾಮ ಮಾಸ್ತರ್ ನೀರ್ಚಾಲ್, ದಾಮೋದರ ಮಣಿಯಾಣಿ ಮಠದ, ರೂಪರಾಜ್ ಪದ್ಮಾರ್, ಅಚ್ಚುತ ಮಾಸ್ತರ್ ಅಗಲ್ಪಾಡಿ, ಶ್ರೀಧರ ಪದ್ಮಾರ್, ಶಿವರಾಮ ಪದ್ಮಾರ್ ಮೊದಲಾದವರು ಉಪಸ್ಥಿತರಿದ್ದರು.