ಮಂಜೇಶ್ವರ: ಮಂಜೇಶ್ವರ ಉಪನೋಂದಣಿ ಕಚೇರಿ ನೂತನ ಕಟ್ಟಡಕ್ಕೆ ಸ್ಥಾಳಾಂತರಗೊಳ್ಳಲಿದೆ. ರಾಜ್ಯೋದಯಕ್ಕೆ ತುಂಬ ಮುನ್ನವೇ ಚಟುವಟಿಕೆ ಆರಂಭಿಸಿದ್ದ ಮಂಜೇಶ್ವರ ಉಪ ನೋಂದಣಿ ಕಚೇರಿ ಅಪೂರ್ವ ಸಾಧನೆಗಳನ್ನು ನಡೆಸಿದೆ. 1884 ಮೇ ತಿಂಗಳಿಂದ ಈ ಕಚೇರಿ ಚಟುವಟಿಕೆ ನಡೆಸಿಕೊಂಡು ಬಂದಿದೆ. ಬ್ರಿಟೀಷ್ ಆಡಳಿತೆ ಅವಧಿಯಲ್ಲಿ ವಿದೇಶಿ ನಿರ್ಮಾಣ ಶೈಲಿಯಲ್ಲಿ ಸಿದ್ಧವಾದ ಕಟ್ಟಡದಲ್ಲಿ 136 ವರ್ಷಗಳ ಕಾಲ ಈ ಕಚೇರಿ ಚಟುವಟಿಕೆ ನಡೆಸಿಕೊಂಡುಬಂದಿದೆ. ಎರಡು ಸಾಲು ಕಲ್ಲುಗಳಿಂದ ಕಟ್ಟಡಲಾದ ಗೋಡೆಯೊಂದಿಗೆ ನಿರ್ಮಿಸಲಾದ ಈ ಕಟ್ಟಡಕ್ಕೆ ಇಂದಿಗೂ ಹೇಳುವಂಥಾ ಯಾವುದೇ ಶಿಥಿಲತೆ ಬಂದಿಲ್ಲ. ಫ್ಯಾನ್ ಅನುಷ್ಠಾನಕ್ಕೆ ಬರುವ ಮುನ್ನ ಬಳಕೆಯಲ್ಲಿದ್ದ ತೂಗಿ ಹಾಕಲಗುವ ಬೀಸಣಿಕೆಗಾಗಿ ಬಳಸುವ ಕೊಂಡಿ ಇಂದಿಗೂ ಈ ಕಚೇರಿಯಲ್ಲಿದೆ. ಇಲ್ಲಿನ 98 ಸೆಂಟ್ಸ್ ಜಾಗದಲ್ಲಿ ಅನೇಕ ಔಷಧ ಸಸ್ಯಗಳನ್ನು ನೆಟ್ಟು ಬೆಳೆಸಲಾಗಿದೆ. ಜೊತೆಗೆ 98 ಸೆಂಟ್ಸ್ ಜಾಗ ಹೊಂದಿರುವ ರಾಜ್ಯದ ಅತ್ಯಪೂರ್ವ ನೋಂದಣಿ ಕಚೇರಿಗಳಲ್ಲಿಇದೂ ಒಂದು ಎಂಬುದೂ ಹೆಗ್ಗಳಿಕೆಯಾಗಿದೆ.
ಕರ್ನಾಟಕ-ಕೇರಳ ರಾಜ್ಯಗಳ ಗಡಿಪ್ರದೇಶವಾಗಿರುವ ಇಲ್ಲಿ ಬಹುಭಾಷೆ ಬಳಕೆಯಲ್ಲಿದೆ. ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾಗವಾಗಿದ್ದ ಇದು ಮಂಗಲೂರು ತಾಲೂಕಿಗೆ ಸೇರಿದ ಕಚೇರಿಯಾಗಿತ್ತು. ಕೈರಂಗಳಮ ಕಿನ್ಯ, ಕೋಟೆಕ್ಕಾರು, ಮಂಜನಾಡಿ, ನರಿಂಗಾನ, ತಲಪ್ಪಾಡಿ ಗ್ರಾಮಗಳ ಸಹಿತ 35 ಗ್ರಾಮಗಳು ಈ ಕಚೇರಿಯ ವ್ಯಾಪ್ತಿಯಲ್ಲಿದ್ದುವು. ಕೇರಳ ರಾಜ್ಯೋದಯವಾದ ಮೇಲೆ ಮಂಜೇಶ್ವರ, ಮಂಗಲ್ಪಾಡಿ, ಪೈವಳಿಕೆ, ಮೀಂಜ, ವರ್ಕಾಡಿ ಸಹಿತ 31 ಗ್ರಾಮಗಳು ಈ ಕಚೇರಿ ವ್ಯಾಪ್ತಿಯಲ್ಲಿವೆ. ಕನ್ನಡ, ಇಂಗ್ಲೀಷ್, ಮಲೆಯಾಳಂ ಭಾಷೆಗಳಲ್ಲಿ ಇಲ್ಲಿ ನೋಂದಣಿ ನಡೆಯುತ್ತಿದೆ.
2019ರಲ್ಲಿ 4663 ಆಧಾರಗಳು ಇಲ್ಲಿ ನೋಂದಣಿಗೊಂಡಿವೆ. 8040 ವಸತಿ ಅರ್ಹತಾಪತ್ರಗಳು, 1910 ಆಧಾರ ನಕಲುಗಳು, 913 ಗಹಾನ್/ಗಹಾನ್ ರಿಲೀಸ್ ಗಳು ಕಳೆದ ವರ್ಷ ನೀಡಲಾಗಿದೆ. ಜೊತೆಗೆ 9 ನೋಂದಣಿ ವಾಹನಗಳು ದಾಖಲಾಗಿವೆ. ಈ ಕಚೇರಿಯ 2019ರ ಆದಾಯ 7,25,81,955 ರೂ. ಆಗಿತ್ತು.
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜನರಿಗೆ ಸೇವೆ ಒದಗಿಸುವಲ್ಲಿ ಹಿಂದಿನ ಕಚೇರಿ ಸಾಲದೇ ಹೋದ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಹಳೆಯ ಕಟ್ಟಡ ಬಳಿಯೇ ನೂತನ ಕಟ್ಟಡದ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 64.66 ಲಕ್ಷ ರೂ. ವೆಚ್ಚಮಾಡಲಾಗಿದೆ ಎಂದು ಉಪನೋಂದಣಿ ಅಧಿಕಾರಿ ರಾಬಿನ್ ಡಿಸೆಲ್ವ ತಿಳಿಸಿದರು. 2017 ನ.24ರಂದು ಸಚಿವ ಜಿ.ಸುಧಾರನ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ್ದರು. 2019 ಜೂನ್ ತಿಂಗಳಲ್ಲಿ ಕಟ್ಟಡದ ನಿರ್ಮಾಣ ಪೂರ್ಣಗೊಂಡಿತ್ತು. ಕೆಲವು ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಉದ್ಘಾಟನೆ ವಿಳಂಬವಾಗಿತ್ತು ಎಂದವರು ನುಡಿದರು. ಜೊತೆಗೆ 37,01,775 ರೂ. ವೆಚ್ಚದಲ್ಲಿ ಸ್ಟೀಲ್ ಇನ್ ಡಸ್ಟ್ರೀಸ್ ಕೇರಳ ಲಿಮಿಟೆಡ್ ಮುಖಾಂತರ ಅತ್ಯಾಧುನಿಕ ಮೊಬೈಲ್ ಕೊಂಪೇಕಟ್ರ್ ರೆಕಾರ್ಡ್ ರೂಂ ಸಿದ್ಧಪಡಿಸಲಾಗಿದೆ. ವಿಶೇಷಚೇತನರ ಸೌಹಾರ್ದ ರೀತಿ ಸಿದ್ಧಪಡಿಸಲಾದ ಕಟ್ಟಡದಲ್ಲಿ ಯಾರ್ಂಪ್ ಸೌಲಭ್ಯ, ಫಲಾನುಭವಿಗಳ ವೈಟಿಂಗ್ ರೂಂ, ಕುಡಿಯುವ ನೀರಿನ ಸೌಲಭ್ಯ, ಟೀವಿ ಇತ್ಯಾದಿಗಳನ್ನೂ ಸಜ್ಜುಗೊಳಿಸಲಾಗಿದೆ.
ಬಾಕ್ಸ್ ಮಾಡಿರಿ
27ರಂದು ಉದ್ಘಾಟನೆ:
ಫೆ.27ರಂದು ಬೆಳಗ್ಗೆ 10 ಕ್ಕೆ ನಡೆಯುವ ಸಮಾರಂಭದಲ್ಲಿ ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ನೂತನ ಕಚೇರಿ ಉದ್ಘಾಟಿಸುವರು. ಖಾಸಕ ಎಂಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು.
ಅಭಿಮತ:
ಕಳೆದೊಂದು ಶತಮಾನದಿಂದಲೂ ಚಟುವಟಿಕೆ ನಡೆಸಿಕೊಂಡು ಬಂದ ಮಂಜೇಶ್ವರ ಉಪ ನೋಂದಣಿ ಕಚೇರಿಯನ್ನು ವಸ್ತು ಸಂಗ್ರಹಾಲಯವಾಗಿ (ಮ್ಯೂಸಿಯಂ) ಪರಿವರ್ತಿಸಿ ಸಂರಕ್ಷಿಸಬೇಕು. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಚಾರಿತ್ರಿಕ ಹೆಜ್ಜೆಗಾರಿಕೆಯನ್ನು ಹೊಂದಿರುವ ಈ ಕಟ್ಟಡ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಧ್ಯಯನ ವಿಷಯವಾಗಿದೆ. ಎರಡು ರಾಜ್ಯಗಳ ಗಡಿಯಗಿರುವುದು ಕೂಡ ಇದರ ವಿಶೇಷತೆಯನ್ನು ಹೆಚ್ಚಿಸಿದೆ.
ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ.