ಮಧೂರು: ಮಧೂರು ಕ್ಷೇತ್ರದ ಮೂಲ ಸ್ಥಾನ ಉಳಿಯತ್ತಡ್ಕದಲ್ಲಿ ನಾಲ್ಕು ದಶಕಗಳಿಂದ ಭಕ್ತರಿಗೆ ಅಭಯವನ್ನೀಡುತ್ತಾ ಬರುತ್ತಿರುವ ಶ್ರೀ ಶಕ್ತಿ ಭಜನಾ ಮಂದಿರದ ವಾರ್ಷಿಕೋತ್ಸವ ಮಾ.24 ರಿಂದ 26 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಈ ಸಂಬಂಧ ಕಾರ್ಯಕ್ರಮದ ಅವಲೋಕನ ನಡೆಯಿತು.
ಅಧ್ಯಕ್ಷ ತಾರಾನಾಥ ಮಧೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಗಟ್ಟಿ ಕಾರ್ಯಕ್ರಮದ ರೂಪುರೇಷೆ ನೀಡಿದರು. ಮಾ.24 ರಂದು ಶ್ರೀ ಶಕ್ತಿ ಭಜನಾ ಸಂಘದ ವಾರ್ಷಿಕ, 25 ರಂದು ಶ್ರೀ ಆಂಜನೇಯ ಸೇವಾ ಸಮಿತಿಯ ವಾರ್ಷಿಕ ಮತ್ತು 26 ರಂದು ಶಕ್ತಿ ಸಭಾಭವನದ ಉದ್ಘಾಟನೆ ನಡೆಯಲಿದೆ. ಫೆ.9 ರಂದು ಬೆಳಗ್ಗೆ 10 ಗಂಟೆಗೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮನೆ ಮನೆಗೆ ವಿತರಿಸಲು ತೀರ್ಮಾನಿಸಲಾಯಿತು.