ಕಾಸರಗೋಡು: ಅತ್ಯಧಿಕ ಪ್ರಮಾಣದಲ್ಲಿ ಹಾಲು ಅಳತೆ ಮಾಡಿರುವ ಮಲಬಾರ್ ವಲಯದ ಪರಿಶಿಷ್ಟ ಜಾತಿ-ಪಂಗಡ ವಿಭಾಗದ ಸಾಧಕರ ಪುರಸ್ಕಾರಕ್ಕೆ ಪರಪ್ಪ ಬ್ಲಾಕ್ ಪಂಚಾಯತಿಯ ಕೋಳಿಚ್ಚಾಲ್ ಹಾಲು ಉತ್ಪಾದಕರ ಸಂಘದ ಕಮಲಾ ಸುಂದರ ಆಯ್ಕೆಯಾಗಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ 24,726 ಲೀಟರ್ ಹಾಲು ಈ ಸಂಘದಲ್ಲಿ ಅಳೆದ ಹಿನ್ನೆಲೆಯಲ್ಲಿ ಅವರು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.