ಕಾಸರಗೋಡು: ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ (ಕೆಎಸ್ ಟಿಎ) ಕಾಸರಗೋಡು ಜಿಲ್ಲಾ ಸಮ್ಮೇಳನವು ಭಾನುವಾರ ವೆಳ್ಳರಿಕ್ಕುಂಡ್ ವ್ಯಾಪಾರ ಭವನದಲ್ಲಿ ಜಿಲ್ಲಾಧ್ಯಕ್ಷ ಮೋಹನ್ ದಾಸ್ ಕುಂಬಳೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಸಮ್ಮೇಳನವನ್ನು ಉದ್ಘಾಟಿಸಿದರು. ಹೊಲಿಗೆ ಕಾರ್ಮಿಕರು ಇಂದು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಂದರ್ಭದಲ್ಲಿ ವಿಚಾರಿಸಿ ಕಾರ್ಮಿಕ ಸಚಿವರೂಂದಿಗೆ ಸಮಾಲೋಚಿಸಿ ಪರಿಹಾರಕ್ಕಾಗಿ ತಾನು ಶಕ್ತಿಮೀರಿ ಪ್ರಯತ್ನಿಸುವೆನೆಂದು ಭರವಸೆ ನೀಡಿದರು.
ಸಂಘಟನೆಯ ರಾಜ್ಯಾಧ್ಯಕ್ಷ ರಾಮನ್ ಚೆನ್ನಿಕ್ಕರ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಯನ್.ದೇವರಾಜನ್, ರಾಜ್ಯ ಸಮಿತಿ ಸದಸ್ಯ ಪಿ.ಯು.ಶಂಕರನ್, ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ವಿ.ಪದ್ಮನಾಭನ್, ಸಿ.ಭಾಸ್ಕರನ್ ನಾಯರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕುಂದನ್.ಪಿ ವಾರ್ಷಿಕ ವರದಿ, ಕೋಶಾಧಿಕಾರಿ ರುಕ್ಮಿಣಿ.ಕೆ, ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಹಿರಿಯ ನೇತಾರ ಪಿ.ನಾರಾಯಣನ್, ಕೆ.ವಿ. ದಾಮೋದರನ್, ಜಿಲ್ಲಾ ಉಪಾಧ್ಯಕ್ಷೆ ಮಾಲತಿ.ಯಂ, ಜೊತೆ ಕಾರ್ಯದರ್ಶಿಗಳಾದ ರಾಧಾಕೃಷ್ಣ ಎಸ್, ಬಿಂದು.ಕೆ.ವಿ. ಉಪಸ್ಥಿತರಿದ್ದರು.
ಕ್ಷೇಮನಿಧಿ ಸೌಲಭ್ಯಗಳನ್ನು ಹೆಚ್ಚಿಸಬೇಕು, ಬಾಕಿ ಇರುವ ಹೆರಿಗೆ ಭತ್ಯೆ ಶೀಘ್ರ ವಿತರಿಸಬೇಕು, ಕಾಸರಗೋಡು ಜಿಲ್ಲಾ ಕ್ಷೇಮ ನಿಧಿ ಕಛೇರಿಗೆ ಅಧಿಕಾರಿಯನ್ನು ನೇಮಕ ಮಾಡಬೇಕು, ಮೊದಲಾದ ಠರಾವುಗಳನ್ನು ಅಂಗೀಕರಿಸಿ, ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಂದಿನ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 42 ಸದಸ್ಯರ ಜಿಲ್ಲಾ ಸಮಿತಿ ರೂಪೀಕರಿಸಿ ಜಿಲ್ಲಾಧ್ಯಕ್ಷರಾಗಿ ಸುರೇಶ್.ಸಿ, ಪ್ರಧಾನ ಕಾರ್ಯದರ್ಶಿ ಪಿ.ಯು.ಶಂಕರನ್, ಕೋಶಾಧಿಕಾರಿ ಮಾಲತಿ.ಯಂ. ಅವರನ್ನು ಆರಿಸಲಾಯಿತು. ಜೊತೆ ಕಾರ್ಯದರ್ಶಿ ಸುರೇಶ್ ಸ್ವಾಗತಿಸಿ, ಉಪಾಧ್ಯಕ್ಷ ಉದಯನ್ ಬಡಾಸಾಬ್ ಕಾರ್ಯಕ್ರಮ ನಿರೂಪಿಸಿದರು. ಯಶೋಧಾ ವಂದಿಸಿದರು.