ಕುಂಬಳೆ: ಮಾನವನ ಬದುಕು ಸುಖಕರವಾಗಿರಲು ಸಾಂಸ್ಕøತಿಕತೆ ಅಗತ್ಯವಾಗಿದೆ. ಭಾಷೆಗೆ ನದೀದಡಗಳಂತಿರುವ ಸಂಸ್ಕøತಿ ಶತಮಾನಗಳಿಂದ ಮಾನವ ಕುಲಕೋಟಿಯನ್ನು ವೈವಿಧ್ಯತೆಯೊಂದಿಗೆ ಶ್ರೀಮಂತಗೊಳಿಸಿದೆ ಎಂದು ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು-ಹೈಸ್ಕೂಲಿನ ಶಿಕ್ಷಕಿ ವಾಣಿ ಪಿ.ಎಸ್.ಅವರು ತಿಳಿಸಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಪ್ರಾಯೋಜಕತ್ವದಲ್ಲಿ ಅಪೂರ್ವ ಕಲಾವಿದರು ಕಾಸರಗೋಡು ನೇತೃತ್ವದಲ್ಲಿ ಎಡನಾಡು ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ಸಹಯೋಗದೊಂದಿಗೆ ಶುಕ್ರವಾರ ಅಪರಾಹ್ನ ನಾಯ್ಕಾಪು ಸಮೀಪದ ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದಲ್ಲಿ ಆಯೋಜಿಸಲಾಗಿದ್ದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕøತಿ ವಿಷಯದಲ್ಲಿ ವಿಶೇಷೋಪನ್ಯಾಸಗೈದು ಅವರು ಮಾತನಾಡಿದರು.
ಭಾಷೆ ಅಂತರಂಗದ ಪ್ರತಿಬಿಂಬವಾಗಿ ಭಾವನೆಗಳ ಸಂವಹನಕ್ಕೆ ರೆಕ್ಕೆಗಳಂತೆ ಶಕ್ತಿ ನೀಡುತ್ತದೆ. ಆದರೆ ಶ್ರೀಮಂತ ಕನ್ನಡ ಭಾಷೆ ಇಂದು ಮೂಲ ಸ್ವರೂಪದಲ್ಲಿ ಬಳಕೆಯಾಗದಿರುವುದು ಭಾಷೆಯ ಬೆಳವಣಿಗೆಗೆ ಹಿನ್ನಡೆಯಾಗಿದೆ. ಕನ್ನಡದ ಶುದ್ದೋಚ್ಚಾರವನ್ನು ಕಡೆಗಣಿಸಿ ಆಂಗ್ಲ ಭಾಷೆಯನ್ನು ತುರುಕುವ ಮೌಢ್ಯತೆಯಿಂದ ಹೊರಬರಬೇಕು ಎಮದು ಅವರು ತಿಳಿಸಿದರು. ಸುಂದರ ಸಾಂಸ್ಕøತಿಕ, ಸಾಹಿತ್ತಿಕ ಹಿನ್ನೆಲೆಯ ಕನ್ನಡ ಭಾಷೆಗೆ ಬೆಂಬಲ ನೀಡುವ ಕಾರ್ಯಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಹೃದಯವಂತಿಕೆಯನ್ನು ಯುವ ಸಮಾಜ ಬೆಳೆಸಬೇಕು ಎಂದ ಅವರು ಮಾತೃಭಾಷೆಯ ಪ್ರೇಮ ಕೌಟುಂಬಿಕ ವಾತಾವರಣ, ಸಹಜ ಬದುಕಿನ ಪೂರಕತೆಗೆ ಬೆನ್ನೆಲುಬು ಎಂದು ತಿಳಿಸಿದರು.
ಮುಜುಂಗಾವು ಶ್ರೀಭಾರತಿ ವಿದ್ಯಾಪೀಠದ ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್ ಮುನ್ನಿಪ್ಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾಷೆ, ಸಾಹಿತ್ಯ , ಪುಸ್ತಕಗಳ ಓದುವಿಕೆಯಂತಹ ಸತ್ ಚಿಂತನೆಗೆ ಪ್ರೇರೇಪಿಸುವ ಇಂತಹ ಕಾರ್ಯಕ್ರಮಗಳು ಸಮಾಜದ ಕರ್ತವ್ಯ ಎಂದರು.
ಅಪೂರ್ವ ಕಲಾವಿದರು ಕಾಸರಗೋಡಿನ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು ಮಾತನಾಡಿ, ವ್ಯಕ್ತಿ ಶಕ್ತಿಯಾಗಿ ಬೆಳೆಯಬಲ್ಲ ಸಾಂಸ್ಕøತಿಕತೆ ಭಾಷೆಯ ಬೇರಿನಿಂದ ಹುಟ್ಟುವುದು. ಕನ್ನಡ ಭಾಷೆಯ ಮೂಲ ಸತ್ವವನ್ನು ಕಾಪಿಡುವಲ್ಲಿ ಹೊಸ ತಲೆಮಾರು ಜವಾಬ್ದಾರಿಯಿಂದ ತೊಡಗಿಸಿಕೊಳ್ಳಬೇಕು ಎಂದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ, ಶ್ರೀಭಾರತಿ ವಿದ್ಯಾಪೀಠದ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ, ಆಡಳಿತಾಧಿಕಾರಿ ಶ್ಯಾಮ ಭಟ್ ದರ್ಬೆಮಾರ್ಗ, ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದ ಅಧ್ಯಕ್ಷ ದಿವಾಣ ಶಿವಶಂಕರ ಭಟ್ ಉಪಸ್ಥಿತರಿದ್ದು ಶುಭಹಾರೈಸಿದರು.
ಮುಖ್ಯೋಪಾಧ್ಯಾಯಿನಿ ಚಿತ್ರಾಸರಸ್ವತಿ ಪೆರಡಾನ ಸ್ವಾಗತಿಸಿದರು. ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಭಾವ ಗಾಯನ ನಡೆಯಿತು. ಬಳಿಕ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನದವರಿಂದ ಸೀತಾಪಹರಣ ಪ್ರಸಂಗದ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರೋಹಿಣಿ ಎಸ್.ದಿವಾಣ ಹಾಗೂ ಶಣ್ಮುಖಕೃಷ್ಣ ಅರೋಳಿ, ಚೆಂಡೆ-ಮದ್ದಳೆಗಳಲ್ಲಿ ರಾಜೇಂದ್ರ ಪ್ರಸಾದ್ ಪುಂಡಿಕಾೈ ಹಾಗೂ ಡಿ.ಕೃಷ್ಣಮೂರ್ತಿ ಪಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ದಿವಾಣ ಶಿವಶಂಕರ ಭಟ್(ರಾವಣ), ಪುರುಷೋತ್ತಮ ಭಟ್ ಕೆ(ಸೀತೆ), ಕಾರ್ತಿಕ್ ಪಡ್ರೆ(ಜಟಾಯು) ಪಾತ್ರಗಳನ್ನು ನಿರ್ವಹಿಸಿದರು.