ಕಾಸರಗೋಡು: ಶೈಕ್ಷಣಿಕ ಕ್ಷೇತ್ರದ ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ 2018-19 ನೇ ಸಾಲಿನಲ್ಲಿ ಬೆಳಗಾವಿ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ 13 ಬಂಗಾರದ ಪದಕಗಳನ್ನು ಪಡೆದ ಮಹಿಮಾ ಎಸ್.ರಾವ್ ಅವರಿಗೆ ನಗರದ ಪೇಟೆ ಶ್ರೀ ವೆಂಕಟರಮಣ ಕ್ಷೇತ್ರ ಆಡಳಿತ ಮಂಡಳಿ, ಶ್ರೀ ವೆಂಕಟರಮಣ ಬಾಲಗೋಕುಲ, ಶ್ರೀ ವೆಂಕಟರಮಣ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರ, ಎಸ್.ವಿ.ಟಿ. ಫ್ರೆಂಡ್ಸ್ ಸರ್ಕಲ್ ಇದರ ವತಿಯಿಂದ ಕ್ಷೇತ್ರದ ಮೊಕ್ತೇಸರರೂ, ತಂತ್ರಿವರ್ಯರೂ ಆಗಿರುವ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಗೌರವಿಸಿದರು.
ಸಮಾರಂಭದಲ್ಲಿ ಕೆ.ಎನ್.ವೆಂಕಟ್ರಮಣ ಹೊಳ್ಳ, ನಾಟ್ಯ ಗುರು ರಾಕೇಶ್ ರೈ ಅಡ್ಕ, ಬಾಲಗೋಕುಲ ಅಧ್ಯಾಪಕಿ ಶ್ರೀಲತಾ ಟೀಚರ್ ಹಾಗು ಬಾಲಗೋಕುಲ ಪ್ರಮುಖ್ ದೇವದಾಸ್ ನುಳ್ಳಿಪ್ಪಾಡಿ ಭಾಗವಹಿಸಿದರು.
ಸವಿತಾ ಟೀಚರ್, ಸತ್ಯನಾರಾಯಣ ಮಾಸ್ತರ್, ಡಾ|ಜನಾರ್ಧನ ನಾಯ್ಕ್ ವ್ಯಯಕ್ತಿಕ ಸ್ಮರಣಿಕೆ ನೀಡಿದರು.
ಬಾಲಗೋಕುಲದ ಮಕ್ಕಳಿಂದ ಪ್ರಾರ್ಥನೆಯ ಬಳಿಕ ಕಿಶೋರ್ ಕುಮಾರ್ ಸ್ವಾಗತಿಸಿದರು. ಮೈತ್ರಿ ಭಟ್ ಮವ್ವಾರು ವಂದಿಸಿದರು. ಕಾರ್ಯಕ್ರಮವನ್ನು ಕೆ.ಎನ್.ರಾಮಕೃಷ್ಣ ಹೊಳ್ಳ ನಿರೂಪಿಸಿದರು.