ಬೀಜಿಂಗ್: ಚೀನಾದಲ್ಲಿ ಉದ್ಭವಿಸಿದ ಕೊರೊನಾ ವೈಸರ್ ಗುಮ್ಮಾ ಇಡೀಯ ವಿಶ್ವಕ್ಕೆ ವ್ಯಾಪಿಸುತ್ತಿದೆ. ಈ ಅಪಾಯಕಾರಿ ವೈರಸ್ ಚೀನಾದಲ್ಲಿ 350 ಕ್ಕೂ ಹೆಚ್ಚು ಬಲಿ ಪಡೆದಿದ್ದು, 8000 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಾಧಿಸುತ್ತಿದೆ. ಇದೀಗ ಭಾರತಕ್ಕೂ ಕಾಲಿಟ್ಟಿದೆ. ಸಾರ್ಸ್ ಸಹ ಚೀನಾದಲ್ಲಿಯೇ ಮೊದಲು ಕಾಣಿಸಿಕೊಂಡಿತ್ತು ಮತ್ತು ಇಡೀಯ ವಿಶ್ವದಲ್ಲೇ ಆತಂಕ ಉಂಟು ಮಾಡಿತ್ತು. ಇದೀಗ ಕೊರೊನಾ ವೈರಸ್ ಮೂಲ ಸಹ ಚೀನಾ ದೇಶವೇ ಆಗಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿವೆ. ಇದಕ್ಕೆ ಪುಷ್ಠಿ ನೀಡುತ್ತಿವೆ ಕೊರೊನಾ ವೈರಸ್ ಕಾಣಿಸಿಕೊಂಡ ಆರಂಭದ ದಿನದಲ್ಲಿ ಚೀನಾದ ಸರ್ಕಾರ ನಡೆದುಕೊಂಡ ರೀತಿ.
ಕೊರೊನಾ ವೈರಸ್ ಬಗ್ಗೆ ಹೆಚ್ಚಿನ ಮಾಹಿತಿ:
ಚೀನಾ ಸಾಮಾನ್ಯ ಜನರನ್ನೂ ಸೇರಿದಂತೆ ಜಗತ್ತಿಗೆ ಲಭ್ಯವಾಗಿದ್ದು ಜನವರಿ ಮಧ್ಯಭಾಗದ ನಂತರ. ಕೆಲವೇ ದಿನಗಳಲ್ಲಿ ಕೊರೊನಾ ಚೀನಾವನ್ನು ಮುಕ್ಕಿ ಇತರೆ ದೇಶಗಳತ್ತಲೂ ಕದಂಬ ಬಾಹುಗಳನ್ನು ಚಾಚಿತು. ಆದರೆ ಕೊರೊನಾ ವೈರಸ್ ಬಗ್ಗೆ ಚೀನಾ ಸರ್ಕಾರಕ್ಕೆ ಡಿಸೆಂಬರ್ ನಲ್ಲಿಯೇ ಮಾಹಿತಿ ಇತ್ತು! ಜನವರಿ ಮೊದಲ ವಾರದಲ್ಲಿ ಚೀನಾ ಪೆÇಲೀಸರು ಎಂಟು ಮಂದಿಯನ್ನು ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆಂದು ಬಂಧಿಸಿ ಜೈಲಿನಲ್ಲಿಟ್ಟರು. ನಿಜವಾಗಿ ಅವರು ಬರೆದಿದ್ದು ಕೊರೊನಾ ವೈರಸ್ ಬಗ್ಗೆಯೇ ಮತ್ತು ಆ ಎಂಟೂ ಮಂದಿ ವೈದ್ಯರಾಗಿದ್ದರು.
ವುಹಾನ್ ನಗರದ ವೈದ್ಯರೇ ಮೊದಲಿಗೆ ಮಾಹಿತಿ ನೀಡಿದ್ದರು ಈ ಘಟನೆ ನಡೆದ ನಂತರ, 'ಸಾರ್ಸ್ ಮಾದರಿಯ ವೈರಸ್ ಒಂದು ಚೀನಾದಲ್ಲಿ ಕಾಣಿಸಿಕೊಂಡಿದೆ' ಈಗ ಕೊರೊನಾದಿಂದ ತತ್ತರಿಸಿ ಹೋಗಿರುವ ವುಹಾನ್ ನಗರದಲ್ಲಿಯೇ ಇದು ಕಾಣಿಸಿಕೊಂಡಿದೆ ಎಂದು ಕೆಲವು ವೈದ್ಯರು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಸರ್ಕಾರದ ಸಹಿತ ಮಾಧ್ಯಮಗಳೂ ಸಹ ಇದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡದೆ ಚೀನಾ ಅಧ್ಯಕ್ಷ ಕ್ಸೀ-ಪಿಂಗ್ ನ ವಿದೇಶ ಪ್ರವಾಸವನ್ನೇ ಆದ್ಯತೆ ಸುದ್ದಿಯಾಗಿ ಪ್ರಕಟಿಸಿದವು. ಪತ್ರಕರ್ತೆಯ ವರದಿಯನ್ನು ಡಿಲಿಟ್ ಮಾಡಲಾಗಿತ್ತು ಇದಾದ ಒಂದು ವಾರದ ಬಳಿಕ ಲುವೆ ರೋಸ್ ಲ್ಯೂಕಿ ಎಂಬ ಹಾಂಕಾಂಗ್‍ನ ಪತ್ರಕರ್ತೆ 'ಟ್ಯಾನ್ಸ್ಯಾಂಡ್' ಎಂಬ ಆನ್‍ಲೈನ್ ಪತ್ರಿಕೆಗಾಗಿ ಲೇಖನವೊಂದನ್ನು ಬರೆದಿದ್ದರು. 'ಸಾರ್ಸ್' ರೀತಿಯ ವೈರಸ್ ದಾಳಿಯಾದಾಗ, ರಾಷ್ಟ್ರೀಯ ತುರ್ತು ಏರ್ಪಟ್ಟಾಗ ಸರ್ಕಾರಗಳು ಪಾರದರ್ಶಕತೆ ಪ್ರದರ್ಶಿಸಬೇಕು ಎಂದು ಅವರು ಹೇಳಿದ್ದರು. ಆದರೆ ಅವರ ಲೇಖನ ಅಂತರ್ಜಾಲದಲ್ಲಿದ್ದಿದ್ದು ಕೇವಲ 10 ಗಂಟೆ ಮಾತ್ರ. ನಂತರ ಅದನ್ನು ಡಿಲೀಟ್ ಮಾಡಲಾಯಿತು.
ವುಹಾನ್ ನಗರದಲ್ಲಿ ದೊಡ್ಡ ಆಹಾರ ಮೇಳವೂ ನಡೆಯಿತು!:
ಜನವರಿ 18 ರಂದು ವುಹಾನ್ ನಗರದಲ್ಲಿ ದೊಡ್ಡ ಆಹಾರ ಮೇಳವೊಂದು ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 14,000 ಮಂದಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ನಡೆದಿದ್ದು, ವೈದ್ಯರುಗಳು 'ಸಾರ್ಸ್' ಮಾದರಿಯ ವೈರಸ್ ಒಂದು ವುಹಾನ್ ನಗರದಲ್ಲಿ ಕಾಣಿಸಿಕೊಂಡಿದೆ ಎಂದು ಹೇಳಿದ ಒಂದು ವಾರದ ಬಳಿಕ. ಅಲ್ಲಿ ಒಬ್ಬರಿಂದೊಬ್ಬರಿಗೆ ಹರಡಿರುವ ವೈರಸ್ ಊಹೆಗೂ ನಿಲುಕದ್ದು. ಈಗ ವುಹಾನ್ ನಗರ ಅತಿ ಹೆಚ್ಚು ಕೊರೊನಾ ವೈರಸ್ ಪೀಡಿತರಿರುವ ನಗರ. ಈ ನಗರವನ್ನು ಈಗ ದಿಗ್ಬಂಧನದಲ್ಲಿಡಲಾಗಿದೆ.
ಬಿಲ್‍ಗೇಟ್ಸ್ ಹರಿಬಿಟ್ಟಿರುವ ರೋಗ' ಎಂದು ಸುಳ್ಳು ಸುದ್ದಿ ಹರಡಿತು:
ಕೊರೊನಾ ವೈರಸ್ ಬಗ್ಗೆ ಮಾಧ್ಯಮಗಳು ವರದಿ ಮಾಡಲು ಪ್ರಾರಂಭಿಸಿದ ನಂತರವೂ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿರಲಿಲ್ಲ. ಆಗಲೇ ಆಗಿದ್ದು ದೊಡ್ಡ ಸಮಸ್ಯೆ. ಮಾಧ್ಯಮಗಳೇನೋ ಕೊರೊನಾ ವೈರಸ್ ಬಗ್ಗೆ ವರದಿಗಳನ್ನು ಪ್ರಕಟಿಸಿತು. ಆದರೆ ಜನರಿಗೆ ಇದರ ಬಗ್ಗೆ ಸೂಕ್ತ ಮಾಹಿತಿ ಇರಲಿಲ್ಲ. ಕೊರೊನಾ ವೈರಸ್ ಅನ್ನು ಜೈವಿಕ ಆಯುಧ ತಯಾರು ಮಾಡುವ ಪ್ರಯೋಗಾಲಯದಲ್ಲಿ ತಯಾರಿಸಲಾಗಿದೆ. ಇದಕ್ಕೆ ಬಿಲ್‍ಗೇಟ್ಸ್ ಹಣ ನೀಡಿದ್ದಾರೆ ಎಂಬೆಲ್ಲಾ ಸುಳ್ಳು ಸುದ್ದಿಗಳು ಚೀನಾದಲ್ಲಿ ಹರಿದಾಡಲು ಪ್ರಾರಂಭಿಸಿದವು. ಬ್ಲೀಚ್ ಕುಡಿದರೆ ಕೊರೊನಾ ವೈರಸ್ ನಿವಾರಣೆ ಆಗುತ್ತದೆ ಎಂದೂ ಸುದ್ದಿಗಳು ಹರಿದಾಡಿದವು.
ಜನವರಿ 20 ಕ್ಕೆ ಬಾಯ್ಬಿಟ್ಟರು:
ಚೀನಾ ಅಧ್ಯಕ್ಷ ಕ್ಸೀ ಪಿಂಗ್ ಜನವರಿ 20 ರ ಹೊತ್ತಿಗೆ ಚೀನಾದಲ್ಲಿ ಕೊರೊನಾ ವೈರಸ್ ತಗುಲಿರುವವರ ಸಂಖ್ಯೆ 200 ದಾಟಿತು. ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಆರಂಭಿಸಲಾಯಿತು. ಮೊದಲ ಬಾರಿಗೆ ಚೀನಾ ಅಧ್ಯಕ್ಷ ಕ್ಸೀ-ಪಿಂಗ್ ವೈರಸ್ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಅಲ್ಲಿಯವರೆಗೆ ಸರ್ಕಾರವು ಸಂಘಟಿತವಾಗಿ ಕೊರೊನಾ ವೈರಸ್ ಎದುರಿಸಲು ರಂಗಕ್ಕೆ ಇಳಿದಿರಲೇ ಇಲ್ಲ. ಕೇವಲ ಅಲ್ಲೊಂದು-ಇಲ್ಲೊಂದು ಆಸ್ಪತ್ರೆಗಳು, ವೈದ್ಯರು ಮಾತ್ರವೇ ವೈರಸ್ ವಿರುದ್ಧ ಹೋರಾಡುತ್ತಿದ್ದರು.
ಏರುತ್ತಲೇ ಹೋಯಿತು ಸಾವಿನ ಸಂಖ್ಯೆ:
ಜನವರಿ 20 ರ ಬಳಿಕ ಏಕಾ-ಏಕಿ ಚೀನಾದೆಲ್ಲೆಡೆ ಆತಂಕ ಶುರುವಾಯಿತು. ಸಾವಿನ ಸಂಖ್ಯೆ ಪ್ರತಿದಿನ ಏರಿಕೆ ಆಗುತ್ತಲೇ ಸಾಗಿತು. ವುಹಾನ್ ನಗರಕ್ಕೇ ದಿಗ್ಬಂಧನ ವಿಧಿಸಲಾಯಿತು. ಸುರಕ್ಷಾ ಕ್ರಮಗಳು, ಆರೋಗ್ಯ ಶಿಬಿರಗಳು, ರೋಗಿಗಳಿಗೆ ವಿಶೇಷ ಆಸ್ಪತ್ರೆಗಳು ಎಲ್ಲವೂ ನಿರ್ಮಾಣವಾದವು. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ನಿಯಂತ್ರಣ ಮೀರಿಬಿಟ್ಟಿತ್ತು.
'ಸರ್ಕಾರ, ಮಾಧ್ಯಮ ಎಚ್ಚರಿಕೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ':
ಅಂತರರಾಷ್ಟ್ರೀಯ ಆರೋಗ್ಯ ತಜ್ಞರ ಪ್ರಕಾರ. ಚೀನಾ ಸರ್ಕಾರ ಮತ್ತು ಮಾಧ್ಯಮಗಳು ಮತ್ತಷ್ಟು ಎಚ್ಚರಿಕೆ ವಹಿಸಿದ್ದರೆ. ಕೊರೊನಾ ಇಷ್ಟು ದೊಡ್ಡಮಟ್ಟದಲ್ಲಿ ವ್ಯಾಪಿಸುತ್ತಿರಲಿಲ್ಲ. ಆರಂಭದ ನಿಧಾನತನವೇ ಚೀನಾವನ್ನು ಇಂದು ಇಕ್ಕಟ್ಟಿಗೆ ಸಿಲುಕಿಸಿದೆ. ಸರ್ಕಾರದ ನಿರ್ಲಕ್ಷ್ಯ ಜನರ ಜೀವಕ್ಕೆ ಬಂದಿದೆ. ವೈರಸ್‍ನ ವರದಿಗಳು ಬಂದಾಗ ಸರ್ಕಾರವು ಅದನ್ನು ಮುಚ್ಚುವ ಪ್ರಯತ್ನ ಮಾಡಿತೇ ಹೊರತು ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ. ಈ ನಡವಳಿಕೆ ಸರ್ಕಾರದ ಬಗೆಗೆ ಅನುಮಾನವನ್ನೂ ಹುಟ್ಟುಹಾಕುತ್ತಿದೆ.