HEALTH TIPS

ಬಹುಮಾನ ಯೋಜನೆಗೆ ಪುಸ್ತಕಗಳ ಆಹ್ವಾನ


      ಕಾಸರಗೋಡು:2019ರ ಜ.1 ರಿಂದ ಡಿ.31ರ ಮಧ್ಯೆ ಪ್ರಥಮಾವೃತ್ತಿಯಲ್ಲಿ ಪ್ರಕಟವಾಗಿರುವ ಅನುವಾದಿತ ಪುಸ್ತಕಗಳನ್ನು ಹಾಗು ಅನುವಾದ ಅಧ್ಯಯನವನ್ನು ಕುರಿತ ಪುಸ್ತಕಗಳನ್ನು 2019 ನೇ ಸಾಲಿನ ಪುಸ್ತಕ ಬಹುಮಾನ ನೀಡಿಕೆಗಾಗಿ ಅರ್ಹ ಅನುವಾದಕರು/ಪ್ರಕಾಶಕರಿಂದ ಆಹ್ವಾನಿಸಲಾಗಿದೆ.
        ಕನ್ನಡದಿಂದ ಇತರ ಯಾವುದೇ ಭಾಷೆಗಾಗಲೀ ಇಲ್ಲವೇ ಇತರ ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಕೃತಿಗಳನ್ನು ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ. 2019 ರ ಸಾಲಿನಲ್ಲಿ ಅನುವಾದ ಸಾಹಿತ್ಯವನ್ನು ಕುರಿತ ಅಧ್ಯಯನ ಪುಸ್ತಕಗಳನ್ನು ಕೂಡ ಬಹುಮಾನಕ್ಕಾಗಿ ಪರಿಗಣಿಸಲಾಗುತ್ತದೆ.
       ಪುಸ್ತಕ ಬಹುಮಾನಕ್ಕೆ ಪುಸ್ತಕಗಳನ್ನು ಕಳುಹಿಸುವವರು ಅನುವಾದಿತ ಪ್ರಕಟಣೆಗಳ ಪ್ರತಿ ಪುಸ್ತಕದ ನಾಲ್ಕು ಪ್ರತಿಗಳನ್ನು ತಪ್ಪದೇ ಕಳುಹಿಸಿಕೊಡಬೇಕು. ನಾಲ್ಕು ಪ್ರತಿಗಳನ್ನು ಕಳುಹಿಸದೇ ಒಂದೇ ಪ್ರತಿಗಳನ್ನು ಕಳುಹಿಸಿಕೊಟ್ಟಲ್ಲಿ ಪುಸ್ತಕವನ್ನು ಬಹುಮಾನಕ್ಕಾಗಿ ಪರಿಗಣಿಸುವುದಿಲ್ಲ ಹಾಗು ಈ ಕುರಿತ ಸಂಬಂ„ತರಿಗೆ ಪ್ರಾ„ಕಾರದಿಂದ ಯಾವುದೇ ಪತ್ರ ಹಾಗು ದೂರವಾಣಿ ವ್ಯವಹಾರವಾಗಲೀ ಇರುವುದಿಲ್ಲ.
ಪುಸ್ತಕಗಳನ್ನು ಕಳುಹಿಸುವವರು ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾ„ಕಾರ ಜ್ಞಾನಭಾರತಿ, ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು-560056, ದೂರವಾಣಿ :23183311/12 ಕಚೇರಿಗೆ ಖುದ್ದಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ದಿನಾಂಕ 28.02.2020 ರೊಳಗಾಗಿ ತಲುಪಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries