HEALTH TIPS

ವಿಜ್ಞಾನ ಮತ್ತು ತಾಂತ್ರಿಕತೆ ಜನಸಾಮಾನ್ಯರಿಗೆ ತಲುಪಬೇಕು : ಕೇಂದ್ರ ಸಚಿವ ವಿ.ಮುರಳೀಧರನ್

   
        ಕಾಸರಗೋಡು: ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಭಾರತ ದೇಶ ವಿಜ್ಞಾನ ಮತ್ತು ತಾಂತ್ರಿಕತೆಯಲ್ಲಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದರ ಹಿಂದೆ ವಿಜ್ಞಾನಿಗಳ ಮತ್ತು ಸಂಶೋಧಕರ ನಿರಂತರ ಪ್ರಯತ್ನ ಹಾಗು ತ್ಯಾಗ ಇದೆ. ಇದರ ಪ್ರಯೋಜನ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂದು ಕೇಂದ್ರ ವಿದೇಶಾಂಗ  ಮತ್ತು ಸಂಸದೀಯ ವ್ಯವಹಾರ ಸಚಿವ ವಿ.ಮುರಳೀಧರನ್ ಹೇಳಿದರು.
       ಸ್ವದೇಶಿ ಸಯನ್ಸ್ ಮೂವ್‍ಮೆಂಟ್(ವಿಜ್ಞಾನ ಭಾರತಿ) ಕೇರಳ ಘಟಕ ಮತ್ತು ಐಸಿಎಆರ್-ಸಿಪಿಸಿಆರ್‍ಐ, ಕೇಂದ್ರೀಯ ವಿದ್ಯಾಲಯ ಕೇರಳ ಸಂಯುಕ್ತ ನೇತೃತ್ವದಲ್ಲಿ ಕೇಂದ್ರ ತೋಟಗಾರಿಕೆ ಬೆಳೆ ಸಂಶೋಧನೆ ಕೇಂದ್ರ(ಸಿಪಿಸಿಆರ್‍ಐ) ದಲ್ಲಿ ಆಯೋಜಿಸಿದ ಸ್ವದೇಶಿ ಸಯನ್ಸ್ ಕಾಂಗ್ರೆಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಾಂತ್ರಿಕತೆ ಅಭಿವೃದ್ಧಿ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಲ್ಲ. ಅದು ವಿಶ್ವಕ್ಕೆ ಸಹಕಾರಿಯಾಗಲಿದೆ. ಭಾರತೀಯ ಪಾರಂಪರಿಕ ವಿಜ್ಞಾನದ ಬಗ್ಗೆ ಎಲ್ಲೆಡೆ ಶಂಕೆ ಇತ್ತು. ಆದರೆ ಇಂದು ಭಾರತೀಯ ಪಾರಂಪರಿಕ ವಿಜ್ಞಾನದ ಬಗ್ಗೆ ವಿಶ್ವವೇ ಗುರುತಿಸಿದೆ. ಈ ಬಗ್ಗೆ ಸಂಶೋಧನೆಗಳನ್ನೂ ನಡೆಸುತ್ತಿದೆ.
       ಕೇರಳದಲ್ಲಿ ಕಳೆದ ಎರಡು ವರ್ಷ ಪ್ರಳಯ, ಭೂಕುಸಿತ ಮೊದಲಾದವುಗಳಿಂದ ಸಂಭವಿಸಿದ ಜೀವ ಹಾನಿ, ನಾಶನಷ್ಟ ಅಷ್ಟಿಷ್ಟಲ್ಲ. ಇಂತಹ ಪ್ರಕೃತಿ ದುರಂತಕ್ಕೆ ಕಾರಣಗಳೇನು ? ಮತ್ತು ಅವುಗಳಿಗೆ ಪರಿಹಾರಗಳೇನು ? ಎಂಬ ಬಗ್ಗೆ ಕೇರಳದ ಜನತೆ ಚಿಂತಿಸದಿರುವುದು ವಿಷಾದನೀಯ ಎಂದರು.

      ವಿಶ್ವದಾದ್ಯಂತ ವಿದ್ಯುತ್ ಸಮಸ್ಯೆ ತಲೆದೋರಿದೆ. ಈ ಸಮಸ್ಯೆಗೆ ಪರಿಹಾರ ಸೌರ ವಿದ್ಯುತ್ ಎಂಬುದು ಭಾರತದ ಸಂದೇಶವಾಗಿದೆ. ಈ ಸಂದೇಶದಿಂದ ಪ್ರಚೋದನೆಗೊಂಡ ವಿಶ್ವದ ಹಲವು ದೇಶಗಳು ಸೌರ ವಿದ್ಯುತ್ ಸ್ಥಾಪಿಸಲು ಭಾರತದ ಮತ್ತು ಇಲ್ಲಿನ ವಿಜ್ಞಾನಿಗಳ ನೆರವು ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದ ಸಚಿವರು ಸೌರ ವಿದ್ಯುತ್‍ನಿಂದ ನೀರಾವರಿ ಯೋಜನೆಗೂ ಸಹಾಯಕವಾಗಿದೆ. ಇಂದು ತೆಂಗು, ಅಡಿಕೆ ಮೊದಲಾದ ಕೃಷಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಪರಿಹಾರಕ್ಕೆ ಸಾಕಷ್ಟು ಸಂಶೋಧನೆಗಳಾಗಿವೆ. ಆದರೆ ಶಾಶ್ವತ ಪರಿಹಾರ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ವಿಜ್ಞಾನಿಗಳು ಮತ್ತು ಸಂಶೋಧಕರು ಪ್ರಯತ್ನಿಸಬೇಕಾಗಿದೆ ಎಂದರು.
      ಕೇರಳದಲ್ಲಿ 44 ನದಿಗಳಿದ್ದರೂ ಇನ್ನೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ. ಮಳೆ ಬಂದ ಕೆಲವೇ ಕ್ಷಣಗಳಲ್ಲಿ ನದಿಗಳ ನೀರು ಸಮುದ್ರ ಸೇರುತ್ತದೆ. ಆದರೆ ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಅಗತ್ಯದ ಕ್ರಮ ತೆಗೆದುಕೊಳ್ಳದಿರುವುದೇ ನೀರಿನ ಸಮಸ್ಯೆಗೆ ಪ್ರಮುಖ ಕಾರಣವೆಂದು ಸಚಿವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ|ಕೆ.ಮುರಳೀಧರನ್ ಅಧ್ಯಕ್ಷತೆ ವಹಿಸಿದರು. ಕೇರಳ ಫಿಶರೀಸ್ ಆ್ಯಂಡ್ ಓಶನ್ ಸ್ಟಡೀಸ್ ವಿ.ವಿ.ಯ ವೈಸ್ ಚಾನ್ಸಲರ್ ಪೆÇ್ರ|ಎ.ರಾಮಚಂದ್ರನ್, ಕೇಂದ್ರೀಯ ವಿದ್ಯಾಲಯ ಕೇರಳ ವೈಸ್ ಚಾನ್ಸಲರ್ ಪೆÇ್ರ|ಜಿ.ಗೋಪ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ವಿಜ್ಞಾನ ಭಾರತೀಯ ವಿವೇಕಾನಂದ ಪೈ, ಪೆÇ್ರ|ಎಸ್.ಕೆ.ಜೆನ, ಭುವನೇಶ್ವರ್, ಎ.ಆರ್.ಎಸ್.ಮೆನೋನ್ ಮೊದಲಾದವರು ಉಪಸ್ಥಿತರಿದ್ದರು. ರಾಜೇಂದ್ರನ್ ಪ್ರಾಸ್ತಾವಿಕ ಮಾತನಾಡಿದರು. ಸಿಪಿಸಿಆರ್‍ಐ ನಿರ್ದೇಶಕಿ ಡಾ|ಅನಿತಾ ಕರುಣ್ ಸ್ವಾಗತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries