ನವದೆಹಲಿ: ವಿಜ್ಞಾನಿಗಳು ವಿಶ್ವದರ್ಜೆಯ ಉತ್ಪನ್ನಗಳನ್ನು ತಯಾರಿಸಲು ಸಾಂಪ್ರದಾಯಿಕ ಜ್ಞಾನ ಮತ್ತು ಆಧುನಿಕ ವಿಜ್ಞಾನವನ್ನು ಸಮನಾಗಿ ಬಳಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರ ದೆಹಲಿಯಲ್ಲಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್ತು (ಸಿಎಸ್ ಐಆರ್ ) ಸಭೆಯ ಅಧ್ಯಕ್ಷತೆ ವಹಿಸಿದ ಮೋದಿ, ವಿಜ್ಞಾನಿಗಳು 5 ಜಿ, ಕೃತಕ ಬುದ್ಧಿಮತ್ತೆಯಂತಹ ಸವಾಲುಗಳು ಮತ್ತು ನವೀಕರಿಸಬಹುದಾದ ಇಂಧನಕ್ಕೆ ಅಗತ್ಯವಿರುವ ಸುಸ್ಥಿರ ಹಾಗೂ ಕಡಿಮೆ ದರದ ಬ್ಯಾಟರಿಗಳ ಮೇಲೆ ಹೆಚ್ಚಿನ ಗಮನಹರಿಸಬೇಕು ಎಂದು ಕರೆ ನೀಡಿದರು. ದೇಶದ ಸಾಮಾನ್ಯ ಜನರ ಜೀವನ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಭವಿಷ್ಯದ ರೂಪುರೇಷೆ ತಯಾರಿಸಬೇಕು. ವಿಜ್ಞಾನಿಗಳು ಭಾರತದ ಅಗತ್ಯಗಳು ಮತ್ತು ಅಪೌಷ್ಠಿಕತೆ, ನೀರು ಸಂರಕ್ಷಣೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದು ಮೋದಿ ಸಲಹೆ ನೀಡಿದರು.
ವಿಜ್ಞಾನ ಕ್ಷೇತ್ರದತ್ತ ಹೆಚ್ಚಿನ ಯುವಜನತೆಯನ್ನು ಆಕರ್ಷಿಸುವ ಅಗತ್ಯವಿದೆ ಎಂದ ಮೋದಿ, ದೇಶದ ವಿವಿಧೆಡೆ ನೆಲೆಸಿರುವ ಭಾರತಿಯರೊಂದಿಗೆ ಕೈಜೋಡಿಸಿ ಸಂಶೋಧನೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಹೊಸ ದಿಕ್ಕಿನೆಡೆ ಕೊಂಡೊಯ್ಯಬೇಕು ಎಂದು ಮೋದಿ ಕರೆ ನೀಡಿದರು.
Chaired a meeting of @CSIR_IND during which we had extensive discussions on the rich work done by them as well as on a roadmap for the times ahead.
Emphasised on the role of CSIR in taking the lead towards harnessing science to improve people’s lives. nm-4.com/cz88
2,571 people are talking about this