ಉಪ್ಪಳ: ಜೋಡುಕಲ್ಲು ಫ್ರೆಂಡ್ಸ್ ಕ್ಲಬ್‍ನ 30ನೇ ವಾರ್ಷಿಕೋತ್ಸªವು ಇಂದು(ಫೆ.1ನೇ ಶನಿವಾರ) ರಾತ್ರಿ 7ರಿಂದ ಜೋಡುಕಲ್ಲು ಜಂಕ್ಷನ್‍ನಲ್ಲಿ ಜರಗಲಿದೆ.
ರಾತ್ರಿ 7ರಿಂದ ನಾಡಿನ ಪ್ರಸಿದ್ಧ ತಂಡಗಳಿಂದ ನೃತ್ಯ ವೈವಿಧ್ಯ ಜರಗಲಿದ್ದು ಬಳಿಕ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರ ಸೇವಿಕಾ ಸಮಿತಿಯ ಜಿಲ್ಲಾ ಕಾರ್ಯವಾಹಿಕೆ ಸರಿತ ದಿನೇಶ್ ಭಾಗವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಹಾಗೂ ಸಮಾಜ ಸೇವಕರಾದ ದಾಮೋದರ ಉಬರಳೆ ಅವರನ್ನು ಸಭೆಯಲ್ಲಿ ಗಣ್ಯರ ಸಮಕ್ಷಮ ಸಮ್ಮಾನಿಸಲಾಗುವುದು.ಈ ಸಂದರ್ಭದಲ್ಲಿ ಕಯ್ಯಾರು ಶ್ರೀ ರಾಮಕೃಷ್ಣ ಎ.ಎಲ್.ಪಿ. ಶಾಲಾ ರ್ಯಾಂಕ್ ವಿಜೇತ ಮಕ್ಕಳಿಗೆ ಹಾಗೂ ಜೋಡುಕಲ್ಲು ಕೇಶವ ಶಿಶುಮಂದಿರದ ಪುಟಾಣಿ ಮಕ್ಕಳಿಗೆ ಪೆÇ್ರೀತ್ಸಾಹಕ ಬಹುಮಾನ ನೀಡಲಾಗುವುದು.
ಬಳಿಕ ಭ್ರಾಮರಿ ಕಲಾವಿದೆರ್ ಉಪ್ಪಳ ತಂಡದಿಂದ `ಬಚ್ಚಾಲಿ ಆಂಡಲಾ ಮೆಚ್ಚೋಲಿ' ತುಳು ಸಾಮಾಜಿಕ ನಾಟಕ ಜರಗಲಿದೆ.