HEALTH TIPS

ದ್ರಾವಿಡ ಸಂಸ್ಕಾರಗಳ ದಾಖಲೆಗಳೊಂದಿಗೆ ರಚನೆಗೊಳ್ಳಲಿದೆ ಮಂಜೇಶ್ವರದ ಸಮಗ್ರ ಇತಿಹಾಸ- ಡಾ.ರಾಜೇಶ್ ಬೆಜ್ಜಂಗಳ ನೇತೃತ್ವದಲ್ಲಿ ನಡೆಯಲಿದೆ ಅಪೂರ್ವ ದಾಖಲೀಕರಣ


      ಮಂಜೇಶ್ವರ: ದ್ರಾವಿಡ ಸಂಸ್ಕಾರಗಳ ಸಂಗಮ ಭೂಮಿ ಮಂಜೇಶ್ವರದ ಸಮಗ್ರ ಇತಿಹಾಸವನ್ನು ದಾಖಲಿಸುವ ಯೋಜನೆ ಸಿದ್ಧವಾಗುತ್ತಿದೆ. ಮಂಜೇಶ್ವರ ಬ್ಲಾಕ್ ಪಂಚಾಯತಿ ಆಶ್ರಯದಲ್ಲಿ ವಿವಿಧ ವಲಯಗಳ ಪರಿಣತರಾಗಿರುವ ನೂರಾರು ಸಂಶೋಧಕರು ನಡೆಸುವ ಈ ಚರಿತ್ರೆ ರಚನೆಯೊಂದಿಗೆ ಈ ಯೋಜನೆ ತಯಾರಾಗುತ್ತಿದೆ.
    ಮಂಜೇಶ್ವರ, ಕುಂಬಳೆ, ಬದಿಯಡ್ಕ ಪ್ರದೇಶಗಳು ಸೇರುವ ಗಡಿವಲಯದ ಸಾವಿರರು ವರ್ಷಗಳ ಮಹತ್ವದ ಆಗುಹೋಗುಗಳನ್ನು ಈ ಚರಿತ್ರೆಯಲ್ಲಿ ದಾಖಲಿಸಲಾಗುವುದು. ಯೋಜನೆಯ ಪ್ರಧಾನ ಸಂಪಾದಕರಾಗಿರುವ, ಕಣ್ಣೂರು ವಿವಿಯ ಕಾಸರಗೋಡು ವಿದ್ಯಾನಗರದ ಚಾಲ ಕ್ಯಾಂಪಸ್ ನ ನಿರ್ದೇಶಕ ಡಾ.ರಾಜೇಶ್ ಬೆಜ್ಜಂಗಳ ಅವರ ನೇತೃತ್ವದಲ್ಲಿ ಈ ಇತಿಹಾಸ ರಚನೆ ಆರಂಭಗೊಂಡಿದೆ.
        ಜನಮಾನಸದಿಂದ ಇಲ್ಲಿನ ಐತಿಹಾಸಿಕ ಅಂಶಗಳು ಮಾಸಿಹೋಗದಂತೆ ಅಕಾಡೆಮಿಕ್ ರೂಪದಲ್ಲಿ ದಾಖಲೀಕರಣ ಇದರ ಮೂಲ ಉದ್ದೇಶ ಎಂದು ಡಾ.ಬೆಜ್ಜಂಗಳ ಅಭಿಪ್ರಾಯಪಡುತ್ತಾರೆ. ಪ್ರತಿ ವಿಚಾರಗಳ ಕುರಿತು ಸುಮಾರು 300 ಲೇಖನಗಳು ಈ ಗ್ರಂಥದಲ್ಲಿರುವುದು. ಈ ವರ್ಷ ಮೇ ತಿಂಗಳಲ್ಲಿ ಸಂಶೋಧನಾ ಲೇನಗಳು ಸಲ್ಲಿಕೆಯಾಗಲಿವೆ. ಈ ಲೇಖನಗಳ ಸೂಕ್ಷ್ಮಾವಲೋಕನ ನಂತರ ಎಪಿಗ್ರಾಫಿಕ್ ಕ್ರೋಡೀಕರಣ ನಡೆಸಿ ಆಗಸ್ಟ್ ತಿಂಗಳಲ್ಲಿ ಗ್ರಂಥ ಲೋಕಾರ್ಪಣೆ ನಡೆಸುವ ಉದ್ದೇಶವಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
      ಮೊದಲ ಹಂತದಲ್ಲಿ ಕನ್ನಡ ಬಾಷೆಯಲ್ಲಿ ಈ ಗ್ರಂಥ ಸಿದ್ಧವಾಗಲಿದೆ. ಬಳಿಕ ಮಲೆಯಾಳಂ ಮತ್ತು ಇಂಗ್ಲೀಷ್ ನಲ್ಲೂ ಅನುವಾದಗೊಳ್ಳಲಿದೆ. 

      ಕೋಟ್ಸ್: 
   ಸಮಗ್ರ ದಾಖಲೀಕರಣ:
          ವಿವಿಧ ಸಾಂಸ್ಕøತಿಕ ಧಾರೆಗಳಾದ ಪ್ರತ್ಯೇಕ ವಲಯಗಳ ಇತಿಹಾಸ, ಐತಿಹಾಸಿಕ ಪುರುಷರು, ಭಾಷಾ ವೈವಿಧ್ಯ, ಧಾರ್ಮಿಕ, ಮತೀಯ ಪಂಗಡಗಳು, ಕೃಷಿ, ವ್ಯಾಪಾರ, ಉದ್ದಿಮೆ-ಆರ್ಥಿಕ ವ್ಯವಹಾರಗಳು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶಿಕ್ಷಣ ಸಂಸ್ಥೆಗಳು, ಕಲಾಪ್ರಕಾರಗಳ ಚರಿತ್ರೆ ಸಹಿತ ಸಮಗ್ರ ವಿಚಾರಗಳು ಈ ರಚನೆಯಲ್ಲಿ ಅಳವಡಗೊಳ್ಳಲಿವೆ. ಮಂಜೇಶ್ವರದ ಸಾಂಸ್ಕೃತಿಕ ವೈವಿಧ್ಯ ಬಗ್ಗೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರೆಫೆರೆನ್ಸ್ ಗ್ರಂಥ ರೂಪದಲ್ಲಿ ಇದು ಪ್ರಯೋಜನಕಾರಿಯಾಗುವಂತೆ ಇದರ ಸಿದ್ಧತೆ ನಡೆಯುತ್ತಿದೆ.
                 ಡಾ.ರಾಜೇಶ್ ಬೆಜ್ಜಂಗಳ, ಕಣ್ಣೂರು ವಿವಿಯ ಚಾಲ ಕ್ಯಾಂಪಸ್ ನಿರ್ದೇಶಕ.
          ಬಾಕ್ಸ್:
      5 ಲಕ್ಷ ರೂ. ಮಂಜೂರು:
    ಮಂಜೇಶ್ವರದ ಸಮಗ್ರ ಇತಿಹಾಸ ರಚನೆ ಯೋಜನೆಯ ಮೊದಲ ಹಂತವಾಗಿ 5 ಲಕ್ಷ ರೂ. ಮಂಜೂರು ಮಾಡಲಾಗಿದೆ.
               ಎ.ಕೆ.ಎಂ.ಅಶ್ರಫ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries