ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೇರಳ ಹೈಕೋರ್ಡ್‍ನ ಮುಖ್ಯ ನ್ಯಾಯಾಧೀಶ ಸುನಿಲ್ ಥೋಮಸ್ ಅವರು ಶನಿವಾರ ಶ್ರೀಎಡನೀರು ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದರು.
ರಾಷ್ಟ್ರದ ಸಂವಿಧಾನದಲ್ಲಿ ಎಡನೀರು ಶ್ರೀಗಳ ವಿಶೇಷ ಉಲ್ಲೇಖಗಳಿರುವ ಕಾಯ್ದೆಯ ಹಿನ್ನೆಲೆಯಲ್ಲಿ ಕಾನೂನು ತಜ್ಞರು, ನ್ಯಾಯಾಧೀಶರುಗಳು ಶ್ರೀಮಠಕ್ಕೆ ಸಾಮಾನ್ಯವಾಗಿ ಭೇಟಿ ನೀಡುವ ಪರಿಪಾಠವನ್ನಿರಿಸಿಕೊಂಡಿದ್ದು, ಉನ್ನತ ನ್ಯಾಯಾಂಗ ವ್ಯವಸ್ಥೆಗೆ ಶ್ರೀಎಡನೀರು ಮಠದ ಅನಘ್ರ್ಯ ಕೊಡುಗೆ ಇಲ್ಲಿ ಉಲ್ಲೇಖಾರ್ಹ.