ಕಾಸರಗೋಡು: ಕಾಪೆರ್Çೀರೇಶನ್ ಬ್ಯಾಂಕ್‍ನ ಕೋರ್ಪ್-ಕಿರಣ್ ಯೋಜನೆಯ ವತಿಯಿಂದ ಕಾಸರಗೋಡಿನ ಬಿ.ಇ.ಎಂ. ಪ್ರೌಢ ಶಾಲೆಗೆ ನೀಡಿದ ಕುಡಿಯುವ ನೀರು ಶುದ್ಧೀಕರಣ ಯಂತ್ರವನ್ನು ಕಾಸರಗೋಡಿನ ಶಾಖಾ ಪ್ರಮುಖರಾದ ಸುರೇಂದ್ರನ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರೇಮ್‍ಜಿತ್, ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಞದ ಅಧ್ಯಕ್ಷ ವೆಂಕಟರಮಣ ಹೊಳ್ಳ, ಶಾಲಾ ಮುಖ್ಯೋಪಾಧ್ಯಾಯ ಕೆ.ಪಿ.ರಾಜೇಶ್ಚಂದ್ರ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್‍ನ ಸಿಬ್ಬಂದಿ ವರ್ಗ, ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಪಾಲ್ಗೊಂಡರು.ಶಾಲಾ ನೌಕರ ಸಂಘದ ಕಾರ್ಯದರ್ಶಿ ಕನಕರಾಜ ಕೆ. ಸ್ವಾಗತಿಸಿ, ಅಧ್ಯಾಪಕ ಯಶವಂತ ವೈ. ವಂದಿಸಿದರು.