ಕುಂಬಳೆ: ರಾಷ್ಟ್ರೀಯ ಕನ್ನಡ ಪರಿಷತ್ತು ಕಾಸರಗೋಡು ಇದರ ಆಶ್ರಯದಲ್ಲಿ ಏಪ್ರಿಲ್ 10, 11 ಮತ್ತು 12 ರಂದು ಸರೋವರ ದೇವಾಲಯ ಅನಂತಪುರ ಪರಿಸರದಲ್ಲಿ ನಡೆಯಲಿರುವ ಬೃಹತ್ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಪೂರ್ವಭಾವಿಯಾಗಿ ವಿವಿಧ ಪ್ರದೇಶಗಳನ್ನು ಕೇಂದ್ರೀಕರಿಸಿ ಪ್ರಾದೇಶಿಕ ಸಮಿತಿಗಳನ್ನು ರಚಿಸಲು ಇತ್ತೀಚೆಗೆ ಕುಂಬಳೆಯಲ್ಲಿ ನಡೆದ ಸಂಘಟನಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಕಾಸರಗೋಡು ಹಾಗೂ ಹೊಸದುರ್ಗ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾ.ಪಂ. ಗಳು, ನಗರಸಭೆ ಹಾಗೂ ಹೊರನಾಡ ಪ್ರದೇಶಗಳಾದ ಮಂಗಳೂರು, ಬೆಂಗಳೂರು, ಮೈಸೂರು, ಮಡಿಕೇರಿ, ಮುಂಬಯಿ, ದೆಹಲಿ, ಎರ್ನಾಕುಳಂ, ತಿರುವನಂತಪುರ ಪ್ರದೇಶಗಳಲ್ಲೂ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ಪ್ರಾದೇಶಿಕ ಸಮಿತಿ ರಚನೆಯ ಮೊದಲ ಹಂತವಾಗಿ ಫೆ.11 ರಂದು ಸಂಜೆ 5ಕ್ಕೆ ಬೆಂಗಳೂರಿನ ಸಮಿತಿ ರಚನೆ-ಸಮಾಲೋಚನಾ ಸಭೆ ಉಪ್ಪಾರ ಪೇಟೆ ಪೋಲೀಸ್ ಠಾಣಾ ಪರಿಸರದಲ್ಲಿರುವ ಹೋಟೆಲ್ ಸ್ವಾಗತ್ ಸಭಾಂಗಣದಲ್ಲಿ ನಡೆಯಲಿದೆ. ಜೊತೆಗೆ ಫೆ.15 ರಂದು ಸಂಜೆ 4ಕ್ಕೆ ಮಂಗಳೂರು ಸಮಿತಿಯ ಸಭೆ ಹಾಗೂ ಸಮಾಲೋಚನೆ ಹೋಟೆಲ್ ವುಡ್‍ಲ್ಯಾಂಡ್ ನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಸಿರಿ ಸಮ್ಮೇಳನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.