ನವದೆಹಲಿ: ಆಧಾರ್ ಪೌರತ್ವ ದೃಢಪಡಿಸುವ ದಾಖಲೆಯಲ್ಲ ಮತ್ತು ಈ ವಿಷಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಸ್ಪಷ್ಟಪಡಿಸಿದೆ.
ಕಾನೂನುಬಾಹಿರ ವಲಸಿಗರು ಎಂದು ಶಂಕಿಸಿರುವ ರಾಜ್ಯ ಪೆÇಲೀಸರ ದೂರುಗಳ ಮೇಲೆ ಸುಳ್ಳು ನೆಪದಲ್ಲಿ ಆಧಾರ್ ಪಡೆಯಲು ಕೆಲವು ನಿವಾಸಿಗಳಿಗೆ ಯುಐಡಿಎಐ ನೋಟಿಸ್ ನೀಡಿ ವಿಚಾರಣೆ ಮಾವಲಿದೆ ಎಂಬ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿದ ನಂತರ ಈ ಸ್ಪಷ್ಟಣೆ ನೀಡಲಾಗಿದೆ. ಈ ವರದಿಗಳನ್ನು ಸರಿಯಾದ ದೃಷ್ಟಿಕೋನದಿಂದ ಮಂಡಿಸಲಾಗಿಲ್ಲ ಮತ್ತು ಆಧಾರ್‍ಗೂ ಪೌರತ್ವಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಯುಐಡಿಎಐ ಸ್ಪಷ್ಟಪಡಿಸಿದೆ. ಆಧಾರ್ ಪೌರತ್ವದ ದಾಖಲೆಯಲ್ಲ ಮತ್ತು ಆಧಾರ್‍ಗೆ ಅರ್ಜಿ ಸಲ್ಲಿಸುವ ಮೊದಲು 182 ದಿನಗಳ ಕಾಲ ಭಾರತದಲ್ಲಿ ವ್ಯಕ್ತಿಯ ವಾಸಸ್ಥಳವನ್ನು ಖಚಿತಪಡಿಸಿಕೊಳ್ಳಲು ಯುಐಡಿಎಐಗೆ ಆಧಾರ್ ಕಾಯ್ದೆಯಡಿ ಕಡ್ಡಾಯವಾಗಿದೆ ಎಂದೂ ಅದು ಹೇಳಿದೆ. ಅಲ್ಲದೆ, ಸುಪ್ರೀಂ ಕೋರ್ಟ್ ತನ್ನ ಹೆಗ್ಗುರುತು ನಿರ್ಧಾರದಲ್ಲಿ ಅಕ್ರಮ ವಲಸಿಗರಿಗೆ ಆಧಾರ್ ನೀಡದಂತೆ ಯುಐಡಿಎಐಗೆ ನಿರ್ದೇಶನ ನೀಡಿದೆ.
ಹೈದರಾಬಾದ್‍ಗೆ 127 ಜನರು ಸುಳ್ಳು ನೆಪಗಳ ಮೇಲೆ ಆಧಾರ್ ಪಡೆದಿದ್ದಾರೆ ಎಂಬ ವರದಿಗಳು ಬಂದಿದ್ದು, ಅವರ ಪ್ರಾಥಮಿಕ ವಿಚಾರಣೆಯಲ್ಲಿ ಅವರು ಆಧಾರ್ ಗರುತಿನ ಚೀಟಿ ಸಂಖ್ಯೆ ಪಡೆಯಲು ಅರ್ಹತೆ ಇಲ್ಲದ ಅಕ್ರಮ ವಲಸಿಗರು ಎಂದು ಕಂಡುಬಂದಿದೆ. ಆಧಾರ್ ಕಾಯ್ದೆಯ ಪ್ರಕಾರ, ಅಂತಹ ಆಧಾರ್ ಸಂಖ್ಯೆಗಳನ್ನು ರದ್ದುಗೊಳಿಸಲಾಗುವುದು. ಅವರ ಉತ್ತರಗಳನ್ನು ಸ್ವೀಕರಿಸಿ ನಂತರ ಪರಿಶೀಲಿಸಿದ ನಂತರ ಅವುಗಳಲ್ಲಿ ಯಾವುದಾದರೂ ಸುಳ್ಳು ದಾಖಲೆಗಳನ್ನು ಸಲ್ಲಿಸಿ, ಸುಳ್ಳು ನೆಪಗಳ ಮೂಲಕ ಆಧಾರ್ ಪಡೆದಿದ್ದರೆ ನಂತರ ಅದು ಸಾಬೀತಾದರೆ, ಅವರ ಆಧಾರ್ ಚೀಟಿಯನ್ನು ರದ್ದು ಇಲ್ಲವೇ ಅಮಾನತುಗೊಳಿಸಲಾಗುವುದು ಎಂದೂ ಯುಐಡಿಎಐ ಹೇಳಿದೆ.