ಪೆರ್ಲ:ಎಣ್ಮಕಜೆ ಪಂಚಾಯಿತಿ 2019-20ರ ಯೋಜನೆಯ ಭಾಗವಾಗಿ ಯಾದಿಯಲ್ಲಿ ಒಳಗೊಂಡ ಫಲಾನುಭವಿ ಕೃಷಿಕರಿಗೆ ಶುಂಠಿ, ಅರಸಿನ ಮತ್ತು ಸುವರ್ಣಗಡ್ಡೆ ಬೀಜಗಳನ್ನು ವಿತರಿಸಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಉದ್ಘಾಟಿಸಿದರು.ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಅಧ್ಯಕ್ಷತೆ ವಹಿಸಿದರು.ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಸದಸ್ಯ ಪುಟ್ಟಪ್ಪ ಖಂಡಿಗೆ ಉಪಸ್ಥಿತರಿದ್ದರು. ಕೃಷಿ ಸಹಾಯಕ ಮುರಳೀಧರನ್ ನಾಯರ್ ಸ್ವಾಗತಿಸಿದರು.ಮನೋಹರನ್ ನಾಯರ್ ವಂದಿಸಿದರು.