HEALTH TIPS

ಕೃಷಿ ಯಂತ್ರೋಪಕರಣಗಳ ಹೊಸ ಆವಿಷ್ಕಾರ, ನೂತನ ಪ್ರಯತ್ನಗಳು ನಡೆದಲ್ಲಿ ಕೃಷಿಕರ ಬೆಳವಣಿಗೆ- ನಬಾರ್ಡ್ ಎ.ಜಿ.ಎಂ. ಜ್ಯೋತಿಷ್ ಜಗನ್ನಾಥ್

   
          ಪೆರ್ಲ: ಕೃಷಿ ಪರಂಪರೆಯಲ್ಲಿ ಹುಟ್ಟಿ ಬೆಳೆದವರಿಗೆ ಕೃಷಿಯ ಆಸಕ್ತಿ ಕಡಿಮೆಯಾಗುತ್ತಿದೆ.ಕೃಷಿಕರ ಮಕ್ಕಳು ಉದ್ಯೋಗ ಅರಸಿ ಪೇಟೆ ಪಟ್ಟಣ ಸೇರುತ್ತಿರುವುದು ಕಂಡು ಬರುತ್ತಿದೆ. ಪರಂಪರಾಗತ ಕೃಷಿ ರೀತಿ, ಸಾವಯವ ಕೃಷಿ ನೀತಿಯನ್ನು ಪೆÇ್ರೀತ್ಸಾಹಿಸುವ ಕೃಷಿ ಮೇಳಗಳು ಅಲ್ಲಲ್ಲಿ ನಡೆಯಬೇಕು.ಕೃಷಿಕರ ಶ್ರಮವನ್ನು ಸರಳಗೊಳಿಸುವ ಯಂತ್ರೋಪಕರಣಗಳ ಅರಿವು, ಪ್ರಾತ್ಯಕ್ಷಿಕೆ ಗ್ರಾಮೀಣ ಕೃಷಿಕರಿಗೆ ಲಭಿಸಬೇಕು ಎಂದು ನಬಾರ್ಡ್ ಎ.ಜಿ.ಎಂ. ಜ್ಯೋತಿಷ್ ಜಗನ್ನಾಥ್ ಹೇಳಿದರು.
       ಪೆರ್ಲ ನಾಲಂದ ಮಹಾವಿದ್ಯಾಲಯ, ಕ್ಯಾಂಪೆÇ್ಕೀ ಲಿಮಿಟೆಡ್, ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಪೆರ್ಲ ನಾಲಂದ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಬೃಹತ್ 'ಕೃಷಿ ಮೇಳ'ದ ಸಮಾರೋಪ ಸಮಾರಂಭ ಮುಖ್ಯ ಭಾಷಣದಲ್ಲಿ ಮಾತನಾಡಿದರು.
        ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಕೃಷಿ ಸಾಲ ಮೊತ್ತ ಏರಿಸಿದೆ.ಕೃಷಿಕರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸಹಾಯ ಧನ ಒದಗಿಸುತ್ತಿದೆ.ಜೈವ ಕೃಷಿಗೆ ಬಹಳಷ್ಟು ಅನುದಾನ ಮೀಸಲಿರಿಸಿದೆ.ಕೃಷಿ ಉತ್ಪನ್ನ ಕೆಡದಂತೆ, ಶೀಘ್ರವಾಗಿ ಮಾರುಕಟ್ಟೆ ತಲಪಿಸಲು ಕಿಸಾನ್ ರೈಲು ಆರಂಭಿಸುವ ಸೂಚನೆ ನೀಡಿದೆ. ಭಾರತದ ಸಂಸ್ಕøತಿಯಲ್ಲಿ ಗೋವುಗಳಿಗೆ ಪ್ರಧಾನ ಪಾತ್ರವಿದೆ.ಕಾಸರಗೋಡು ಗಿಡ್ಡ ತಳಿ  ಔಷಧೀಯ ಗುಣದ ಹಾಲಿಗೆ ಪ್ರಸಿದ್ಧಿ ಪಡೆದಿದೆ.ಗೋಮೂತ್ರ, ಹಾಲು, ಸೆಗಣಿ ಸೇರಿ ಇನ್ನಿತರ ಗೋ ಉತ್ಪನ್ನಗಳಲ್ಲಿ ಔಷಧೀಯ ಗುಣಗಳಿರುವುದು ಸಂಶೋಧನೆಯಲ್ಲಿ ದೃಢಪಟ್ಟಿವೆ. ಕೇರಳದಲ್ಲಿ ಅತಿ ಹೆಚ್ಚು 20,200 ಹೆಕ್ಟೇರ್ ಅಡಕೆ ಕೃಷಿ ತೋಟ ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಿಸಿದೆ.ಅಡಿಕೆ ಕೊಯ್ಲು, ಔಷಧಿ ಸಿಂಪಡಣೆಗೆ ಅಡಕೆ ಮರ ಏರ ಬೇಕಾಗಿದೆ.ಅಡಕೆ ಮರ ಏರಿ ಮೇಲೆ ಕುಳಿತು ಔಷಧಿ ಸಿಂಪಡಣೆ, ಅಡಿಕೆ ಕೆuಟಿಜeಜಿiಟಿeಜಯ್ಲು ನಡೆಸುವುದು ಸುಲಭದ ಕೆಲಸವಲ್ಲ.ಕಾರ್ಮಿಕರ ಸಮಸ್ಯೆ ಕೃಷಿಕರಿಗೆ ಬಹು ದೆuಟಿಜeಜಿiಟಿeಜಡ್ಡ ಸಮಸ್ಯೆಯಾಗಿದೆ.ಇದನ್ನು ನೀಗಿಸಲು ವಿಭಿನ್ನ ಪ್ರಯತ್ನಗಳು ನಡೆಯುತ್ತಲೇ ಇವೆ.ಒಂದು ಕಡೆ ಯಂತ್ರಗಳ ಆವಿಷ್ಕಾರ ನಡೆಯುತ್ತಿದ್ದರೆ ಮತ್ತೂಂದು ಕಡೆ ಸುಲಭ ಹಾಗೂ ರಕ್ಷಣಾತ್ಮಕವಾಗಿ ಮರ ಏರುವ ಅಧ್ಯಯನ, ಪ್ರಯತ್ನ ಗಳು ನಡೆಯುತ್ತಿವೆ.ಅಡಕೆ ಮರ ಏರುವ,  ಔಷಧಿ ಸಿಂಪಡಣೆ, ಒಣ ಅಡಕೆ ಸುಲಿಯುವ ಮತ್ತಿತರ ಕೃಷಿ ಯಂತ್ರೋಪಕರಣಗಳ ಹೊಸ ಹೊಸ ಆವಿಷ್ಕಾರಗಳು ನಡೆಯಿತ್ತಿವೆ.ಕೃಷಿ ಶ್ರಮ ಸರಳ ಗೊಳಿಸುವ ಆಧುನಿಕ ಅವಿಷ್ಕಾರಗಳು ಹಾಗೂ ನೂತನ ಪ್ರಯತ್ನಗಳನ್ನು ಮಾಡಿದಾಗ ಮಾತ್ರ ಕೃಷಿಕರ ಬೆಳವಣಿಗೆ ಸಾಧ್ಯ ಎಂದರು.
        ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ನಾಲಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ಡಾ. ಚಂದ್ರಶೇಖರ ಚೌಟ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿದರು.ಕ್ಯಾಂಪೆÇ್ಕೀ ಮಂಗಳೂರು ಉಪಾಧ್ಯಕ್ಷ ಶಂ.ನಾ.ಖಂಡಿಗೆ ಸ್ವಾಗತಿಸಿದರು.ನಾಲಂದ ಕಾಲೇಜು ಆಡಳಿತ ಮಂಡಳಿ ಸದಸ್ಯ ರಾಜಶೇಖರ್ ಪೆರ್ಲ ವಂದಿಸಿದರು.ಉಪನ್ಯಾಸಕಿ ಅಮೃತ, ವಿನೀಶಾ ನಿರೂಪಿಸಿದರು.
      ಕೃಷಿ ಯಂತ್ರದ ಹೊಸ ಆವಿಷ್ಕಾರದಲ್ಲಿ ಗುರುತಿಸಲ್ಪಟ್ಟವರಿಗೆ, ಸ್ಥಳೀಯ ಉತ್ತಮ ಕೃಷಿಕರು, ಉತ್ತಮ ಪ್ರದಶನ ಮಳಿಗೆ, ಉತ್ತಮ ಕೃಷಿ ಉತ್ಪನ್ನ(ಅಡಕೆ, ತೆಂಗು, ಕೊಕ್ಕೋ, ಬಾಳೆ ಪ್ರದರ್ಶನಕ್ಕೆ ಕ್ಯಾಂಪೆÇ್ಕೀ ವತಿಯಿಂದ ವಿಶೇಷ ಬಹುಮಾನ ನೀಡಿ, ಸನ್ಮಾನಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries