ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಜದಗುಡ್ಡೆ ಶ್ರೀ ಮೂಕಾಂಬಿಕಾ ಧೂಮಾವತೀ ದೈವಸ್ಥಾನದ ಪ್ರತಿಷ್ಠಾ ದಿನಾಚರಣೆ ಮತ್ತು ಶ್ರೀ ದೈವಗಳ ಧರ್ಮನೇಮೋತ್ಸವ ಮಾರ್ಚ್ 3, 5 ಮತ್ತು 6ರಂದು ಜರುಗಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಶುಭಾಶೀರ್ವಾದದೊಂದಿಗೆ ಕಾರ್ಯಕ್ರಮ ನಡೆಯುವುದು. 3ರಂದು ಪ್ರತಿಷ್ಠಾ ದಿನಾಚರಣೆ ನಡೆಯಲಿದೆ.
5ರಂದು ಸಾಯಂಕಾಲ 7ಕ್ಕೆ ಭಂಡಾರದ ಮನೆಯಿಂದ ಶ್ರೀ ಧೂಮಾವತೀ ದೈವದ ಭಂಡಾರ ಆಗಮನದ ನಂತರ ತೊಡಂಙಳ್ ನಡೆಯುವುದು. ರಾತ್ರಿ 10ಕ್ಕೆ ಶ್ರೀ ಮೂಕಾಂಬಿಕಾ ದೈವದ ನೇಮೋತ್ಸವ ನಡೆಯುವುದು. 6ರಂದು ಬೆಳಗ್ಗೆ 11ಕ್ಕೆ ಶ್ರೀ ಧೂಮಾವತೀ ದೈವದ ನೇಮೋತ್ಸವ, ಮಧ್ಯಾಹ್ನ 3ಕ್ಕೆ ಶ್ರೀದೈವದ ಭಂಡಾರ ನಿರ್ಗಮನ, ರತ್ರಿ 8ಕ್ಕೆ ತರವಾಡುಮನೆಯಲ್ಲಿ ಶ್ರೀ ಕೊರತಿ ದೈವದ ಕೋಲ ನಡೆಯುವುದು.