HEALTH TIPS

ದರ್ಬಾರ್ ಕಟ್ಟೆ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮಗಳಿಗೆ ಚಾಲನೆ

Top Post Ad

Click to join Samarasasudhi Official Whatsapp Group

Qries

Qries
 
         ಕುಂಬಳೆ:  ಕುಂಬಳೆ ಇಚ್ಲಂಪಾಡಿ ದರ್ಬಾರ್‍ಕಟ್ಟೆ ಸಮೀಪದ ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ  ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು ಮಾ.7ರ ತನಕ ನಡೆಯಲಿದೆ.
    ಶುಕ್ರವಾರ ಬೆಳಿಗ್ಗೆ 5 ರಿಂದ ಗಣಪತಿ ಹವನ, ಉಗ್ರಾಣವರಣ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಜೊತೆಗೆ  ರಕ್ತೇಶ್ವರಿ ಮಹಿಳಾ ಭಜನಾ ಸಂಘ ಕುತ್ಯಾಳ, ವಿಘ್ನೇಶ್ವರ ಮಹಿಳಾ ಭಜನಾ ಸಂಘ ನಾಯ್ಕಾಪು ಹಾಗೂ ಮಹಾವಿಷ್ಣು ಮಹಿಳಾ ಭಜನಾ ಸಂಘ ನಾರಾಯಣಮಂಗಲ ತಂಡದವರಿಂದ ಭಜನಾ ಸಂಕೀರ್ತನೆಗಳು ನಡೆಯಿತು. ಈ ಸಂದರ್ಭ ಭಜನಾ ಗುರು ರಾಮಕೃಷ್ಣ ಕಾಟುಕುಕ್ಕೆ ಅವರನ್ನು ಗೌರವಿಸಲಾಯಿತು.  ಸಂಜೆ 5 ರಿಂದ ತಂತ್ರಿವರ್ಯ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಬಳಿಕ ಆಚಾರ್ಯವರಣ, ಅಂಕುರಾರೋಹಣ, ಪ್ರಾಸಾದ ಶುದ್ದಿ, ಸ್ಥಳಶುದ್ದಿ, ರಕ್ಷಾ ಕಲಶಪೂಜೆ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಕಲಶ ಪೂಜೆ, ವಾಸ್ತುಬಲಿ, ರಾತ್ರಿ ಪೂಜೆಗಳು ನೆರವೇರಿತು. ಸಂಜೆ ಆರ್ಟ್ ಆಫ್ ಲಿವಿಂಗ್ ಭಜನಾ ತಂಡ ಮತ್ತು ವಸಂತ ಬಳಗ ಆರಿಕ್ಕಾಡಿ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು.  ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7 ರಿಂದ ಶಿಶಿರ ಬಾಲಸಭೆ ಕೋಟೆಕ್ಕಾರ್ ತಂಡದಿಂದ ಕಾರ್ಯಕ್ರಮ ವೈವಿಧ್ಯಗಳು, 8 ರಿಂದ ರಾಜರಾಜೇಶ್ವರಿ ಮಹಿಳಾ ಸಂಘ ಮುಂಡಪ್ಪಳ್ಳ ಇವರಿಂದ ನೃತ್ಯ ವೈವಿಧ್ಯಗಳು ನಡೆಯಿತು. ಬೆಳಿಗ್ಗೆ ವಿವಿಧೆಡೆಗಳಿಂದ ಹಸಿರುವಾಣಿ ಹೊರೆಕಾಣಿಕೆಗಳು ಆಗಮಿಸಿದ್ದವು.
       ಇಂದಿನ ಕಾರ್ಯಕ್ರಮ(ಶನಿವಾರ):
   ಶನಿವಾರ ಬೆಳಿಗ್ಗೆ 5 ರಿಂದ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 4 ರಿಂದ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಉದ್ಘಾಟಿಸುವರು.  ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಆಶೀರ್ವಚನ ನೀಡುವರು. ಮಂಜೇಶ್ವರ ಶಾಸಕ ಎಂ.ಸಿ.ಖಮರುದ್ದೀನ್, ಶಾಸಕ ಎನ್.ಎ.ನೆಲ್ಲಿಕುನ್ನು, ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಸುಗಣಾ ಬಿ.ತಂತ್ರಿ ದೇಲಂಪಾಡಿ, ಪುಂಡರೀಕಾಕ್ಷ ಕೆಎಲ್, ಕೋಳಾರು ಕುಂಞಣ್ಣ ಭಂಡಾರಿ, ಸತ್ಯಶಂಕರ ಭಟ್, ಗೀತಾ ಲೋಕನಾಥ ಶೆಟ್ಟಿ, ರಘುರಾಮ ರೈ, ಸೋಮಶೇಖರ ಜೆ.ಎಸ್., ಸದಾನಂದ ಕಾಮತ್, ಎಂ.ಸುಕುಮಾರ, ಶಂಕರನಾರಾಯಣ ಭಟ್, ಬಾಬು ಪಚ್ಚಿಲಂಪಾರೆ ಮತ್ತಿತರರು ಉಪಸ್ಥಿತರಿರುವರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries