ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದಲ್ಲಿರುವ ಸುಮಾರು 400 ವರ್ಷಗಳಷ್ಟು ಪುರಾತನವಾದ ನಂದಿ ವಿಗ್ರಹದಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ ಎಂಬ ದೂರುಗಳನ್ನು ಪರಿಶೀಲಿಸಲು ಪುರಾತತ್ವ ಇಲಾಖೆಯ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮೂಲಗಳು ಬುಧವಾರ ಹೇಳಿವೆ.
ಇದಕ್ಕೂ ಮೊದಲು ಕಳೆದ ಜನವರಿಯಲ್ಲಿ ಮೈಸೂರು ಪಾರಂಪರಿಕಾ ಸಮಿತಿ ಸದಸ್ಯ ಹಾಗೂ ಇತಿಹಾಸಕಾರ ಪೆÇ್ರೀ. ಎನ್.ಎಸ್. ರಂಗರಾಜು ವಿಗ್ರಹದ ಮೇಲೆ ಕಾಣಿಸಿಕೊಂಡಿರುವ ಬಿರುಕುಗಳನ್ನು ಪತ್ತೆ ಹಚ್ಚಿ, ಐತಿಹಾಸಿಕ ನಂದಿ ವಿಗ್ರಹ ಮತ್ತಷ್ಟು ಹಾನಿಗೊಳ್ಳುವುದನ್ನು ತಡೆಯಲು ಸೂಕ್ತ ನಿಗ್ರಹ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ನಂದಿ ಪ್ರತಿಮೆಯ ಬಲ ತೊಡೆಯ ಬಳಿ ಮತ್ತು ಏಕಶಿಲೆಯಲ್ಲಿ ಕೆತ್ತಿದ ಮುಖದಲ್ಲಿ ಬಿರುಕುಗಳನ್ನು ರಂಗರಾಜು ಅವರು ಪತ್ತೆ ಹಚ್ಚಿದ್ದರು. ನಾಲ್ವಡಿ ಕೃಷ್ಣರಾಜ ಓಡೆಯರ್ ಅವರ ನೆನಪಿಗಾಗಿ ದಿ. ಸರ್ ಎಂ. ವಿಶ್ವೇಶ್ವರಯ್ಯ ನಂದಿ ಪ್ರತಿಮೆ ಯನ್ನು ಉದ್ಘಾಟಿಸಿದ್ದರು.
ಸುಮಾರು 400 ವರ್ಷಗಳ ಹಳೆಯದಾದ ನಂದಿ ವಿಗ್ರಹ ಇದ್ದಾಗಿದ್ದು 1659-73ರಲ್ಲಿ ನಿರ್ಮಾಣಗೊಂಡಿದೆ. ಚಾಮುಂಡಿ ಬೆಟ್ಟದ ಪ್ರಮುಖ ಕೇಂದ್ರ ಬಿಂದು ವಾಗಿರುವ ಈ ನಂದಿ ವಿಗ್ರಹ. ವಿಗ್ರಹದ ಕಾಲು, ಕುತ್ತಿಗೆ ಹಾಗೂ ಮುಖದ ಕೆಲವೆಡೆ ಬಿರುಕು ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತಕ್ಕೆ ತಿಳಿಸಲಾಗಿತ್ತು.