ನವದೆಹಲಿ: 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಬೇಕೆಂದು ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್ ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಾನೆ.
ಗುಪ್ತಾ (25) ಗೆ ಮಾರ್ಚ್ 3ಕ್ಕೆ ಮರಣದಂಡನೆ ಶಿಕ್ಷಿ ವೆಧಿಸಲಾಗುತ್ತಿದ್ದು ಇದೇ ದಿನ ಪ್ರಕರಣದ ಇಅತ್ರೆ ಮೂವರೂ ಸಹ ಗಲ್ಲುಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಆದರೆ ತನಗೆ ಮರಣದಂಡನೆ ವಿಧಿಸಬಾರದು ಎಂದು ಕ್ಯುರೇಟಿವ್ ಮನವಿ ಸಲ್ಲಿಸಿರುವ ಗುಪ್ತಾ ಮರಣದಂಡನೆಗೆ ಬದಲು ಜೀವಾವಧಿ ಜೈಲು ಶಿಕ್ಷೆ ವಿಧಿಸುವಂತೆ ಕೋರಿದ್ದಾನೆ. ಗುಪ್ತಾ ಪರ ವಕೀಲರಾದ ಎ ಪಿ ಸಿಂಗ್ ನ್ಯಾಯಾಲಯದಲ್ಲಿ ತಮ್ಮ ಕಕ್ಷಿದಾರನ ಪರ ಅರ್ಜಿ ಸಲ್ಲಿಕೆ ಮಾಡಿದರು. ಕ್ಯುರೇಟಿವ್ ಅರ್ಜಿ ಸಲ್ಲಿಸದ ಹಾಗೂ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನೂ ಸಲ್ಲಿಸದ ನಿರ್ಭಯಾ ಪ್ರಕರಣದ ಏಕೈಕ ಅಪರಾಧಿ ಗುಪ್ತಾ ಆಗಿದ್ದ.
ಡಿಸೆಂಬರ್ 16, 2012 ರಂದು, ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.