ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಬುಧವಾರ ಜರುಗಿತು. ಪ್ರಸಾದ ವಿತರಣೆಯ ನಂತರ ಧ್ವಜಾವರೋಹಣ ನಡೆಸುವ ಮೂಲಕ ಐದು ದಿವಸಗಳ ಜಾತ್ರಾಮಹೋತ್ಸವ ಸಂಪನ್ನಗೊಂಡಿತು.
ಮಂಗಳವಾರ ಸಾರ್ವಜನಿಕ ಶ್ರೀ ಸತ್ಯನಾರಾಯಣಪೂಜೆ ನಡೆಯಿತು. ಧಾರ್ಮಿಕ ಸಭೆ, ಪೆರ್ಲದ ವಿದ್ಯಾಪಲ್ಲವಿ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಕ್ತಿಭಾವ ಸಂಗಮ, ಸಾಯಂಕಾಲ ಸುಡುಮದ್ದುಪ್ರದರ್ಶನ, ಶ್ರೀ ಉಳ್ಳಾಲ್ತೀ ಮಹಿಳಾ ಮತ್ತು ಸ್ಥಳೀಯ ಮಕ್ಕಳಿಂದನೃತ್ಯ ವೈವಿಧ್ಯ ನಡೆಯಿತು.