ಬೆಂಗಳೂರು: ಟ್ವಿಟರ್ ಇಂಡಿಯಾ ನಿನ್ನೆ ಮಾಡಿದ್ದ ಒಂದು ಟ್ವೀಟ್ ಕನ್ನಡಿಗರ ಖುಷಿಗೆ ಕಾರಣವಾಗಿದೆ.
ಮಂಗಳವಾರ ಮಧ್ಯಾಹ್ನ 1.11 ನಿಮಿಷಯದಲ್ಲಿ ಟ್ವಿಟರ್ ಇಂಡಿಯಾ "ಏನ್ ಸಮಾಚಾರ" ಎಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ ಖುಷಿ ವ್ಯಕ್ತಪಡಿಸಿರುವ ಕನ್ನಡಿಗರು, ಕನ್ನಡಿಗರಿಗೆ ಉದ್ಯೋಗ ಕೊಟ್ಟ ಟ್ವಿಟರ್ ಧನ್ಯವಾದ ಹೇಳಿದ್ದಾರೆ. ಬಳಿಕ ಈ ಟ್ವೀಟ್ ವ್ಯಾಪಕ ವೈರಲ್ ಆಗಿದ್ದು, ರಾತ್ರಿ ವೇಳೆ 14 ಸಾವಿರ ಬಾರಿ ರಿಟ್ವೀಟ್ ಆಗಿದ್ದು, 66 ಸಾವಿರ ಲೈಕ್ ಪಡೆದಿದೆ. ಅಂತೆಯೇ 16 ಸಾವಿರ ಪ್ರತಿಕ್ರಿಯೆಗಳು ಬಂದಿವೆ.
ಇನ್ನು 'ಏನ್ ಸಮಾಚಾರ' ಎಂದು ಪ್ರಶ್ನೆ ಹಾಕಿದ ಟ್ವಿಟರ್ ಇಂಡಿಯಾಕ್ಕೆ ಟ್ವೀಟರ್ ಬಳಕೆದಾರರು ಹಲವು ಬಗೆಯ ಉತ್ತರಗಳನ್ನೇ ನೀಡಿದ್ದು, ಈ ಪೈಕಿ ಸಿಂಪಲ್ ನಿರ್ದೇಶಕ ಸುನಿ ಕೂಡ ಪ್ರತಿಕ್ರಿಯೆ ನೀಡಿ ಸಿನಿರಂಗದ ಇತ್ತೀಚೆಗಿನ ಬೆಳವಣಿಗೆಗಳನ್ನು ಸುದ್ದಿರೂಪದಲ್ಲಿ ನೀಡಿದ್ದಾರೆ.
ಮೊನ್ನೆ D Boss birthday
ನೆನ್ನೆ ಅಪ್ಪು ಸಾರ್ ನಿರ್ಮಿಸಿರುವ "ಮಾಯಾಬಜಾ಼ರ್" ಚಿತ್ರದ ಟೀಸರ್ ರಿಲೀಸ್
ಇಂದು ರಾಷ್ಟ್ರೀಯ ಪೋಷಕ ನಟಿ
ಕಿಶೋರಿ ಬಲ್ಲಾಳ್ ರವರಿಗೆ ಅಂತಿಮ ನಮನ
ನಾಳೆ "ಶಿವಣ್ಣ" ನವರ ಹೊಸ ಚಿತ್ರದ ಮುಹೂರ್ತ..
feb 21st "ಕೋಟಿಗೊಬ್ಬ 3" ಟೀಸರ್ ರಿಲೀಸ್,,
ಅಂದಹಾಗೆ #ಅವತಾರಪುರುಷ ಟೀಸರ್ ನೋಡುದ್ರಾ!
ಮತ್ತೆ ನಿಮ್ದೇನ್ ಸಮಾಚಾರ..