ಕಾಸರಗೋಡು: ಕುಂಬಳೆ ಕಿದೂರು ಸನಿಹದ ಅಮೆತ್ತೋಡು ಶ್ರೀ ಧೂಮಾವತೀ ದೈವಸ್ಥಾನದ ಪ್ರತಿಷ್ಠಾ ದಿನಾಚರಣೆ ಮತ್ತು ವಾರ್ಷಿಕ ನೇಮೋತ್ಸವ ಫೆಬ್ರವರಿ 9ಹಾಗೂ 10ರಂದು ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 2ರಂದು ಗೊನೆಮುಹೂರ್ತ ನಡೆಯುವುದು. 9ರಂದು ಬೆಳಗ್ಗೆ 7.30ಕ್ಕೆ ಗಣಪತಿ ಹೋಮ, ಪ್ರತಿಷ್ಠಾ ದಿನಾಚರಣೆ ಅಂಗವಾಗಿ ತಂಬಿಲ ಸೇವೆ, ನಾಗತಂಬಿಲ, 11ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 12ಕ್ಕೆ ಹರಿಸೇವೆ, ಸಾಯಂಕಾಲ 6ಕ್ಕೆ ಭಜನೆ, ಶ್ರೀ ಉಳ್ಳಾಕ್ಲು ಬನದಲ್ಲಿ ಪ್ರಾರ್ಥನೆ, ರಾತ್ರಿ 8ಕ್ಕೆ ಕಲ್ಲಾಲ್ತ ಗುಳಿಗನ ಕೋಲ ನಡೆಯುವುದು.
10ರಂದು ಬೆಳಗ್ಗೆ 10ಕ್ಕೆ ಶ್ರೀ ಧೂಮಾವತೀ ದೈವದ ಧರ್ಮನೇಮ, ಸಾಯಂಕಾಲ 5ಕ್ಕೆ ಕೊರತಿದೈವದ ಕೋಲ, ರಾತ್ರಿ 8ಕ್ಕೆ ಪರಿವಾರ ದೈವಗಳ ಭಂಡಾರ ಇಳಿಯುವುದು, 9ರಿಂದ ಮೊಡಚಾಮುಮಡಿ, ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ, ಮುಕಾಂಬಿಕಾಗುಳಿಗ, ಕಲ್ಲುರ್ಟಿ ಮತ್ತು ಕೊರಗತನಿಯ ದೈವಗಳ ಕೋಲ ನಡೆಯುವುದು.