ಕಾಸರಗೋಡು: ಅಣಂಗೂರು ಜೆ.ಪಿ.ನಗರದ ಶ್ರೀ ಕೊರಗಜ್ಜ ಹಾಗೂ ಶ್ರೀ ಚೌಕಾರು ಗುಳಿಗ ಸನ್ನಿಧಿ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಧಾರ್ಮಿಕ ಮುಂದಾಳು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅವರು ಕ್ಷೇತ್ರ ಪರಿಸರದಲ್ಲಿ ಬಿಡುಗಡೆಗೊಳಿಸಿ, ಆಶಿರ್ವದಿಸಿದರು.
ಕಾರ್ಯಕ್ರಮದಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಪಿ.ಎಸ್.ಕೃಷ್ಣ ಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದರು. ಶ್ರೀ ಕೊರಗಜ್ಜ ಸನ್ನಿ„ ಮೊಕ್ತೇಸರ ಬಾಬು ಪೂಜಾರಿ, ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷ ನ್ಯಾಯವಾದಿ ಪಿ.ಮುರಳೀಧರನ್, ಪ್ರತಿಷ್ಠಾ ಮಹೋತ್ಸವ ಸಮಿತಿ ರಕ್ಷಾ„ಕಾರಿ ಕೆ.ಎನ್.ವೆಂಕಟ್ರಮಣ ಹೊಳ್ಳ, ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷೆ ಪ್ರೇಮಾ ಎಲ್ಲೋಜಿ ರಾವ್, ನಗರಸಭಾ ಸದಸ್ಯೆ ಕೆ.ಸಂಧ್ಯಾ ಶೆಟ್ಟಿ, ಪ್ರತಿಷ್ಠಾ ಮಹೋತ್ಸವ ಸಮಿತಿ ಸಂಚಾಲಕ ಹರೀಶ್ ಕುಮಾರ್ ಕೆ.ಎಂ.ಕೋಟೆಕಣಿ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಶಂಕರ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಬಿ. ವಂದಿಸಿದರು.